ಕನ್ನಡ ಕಡೆಗಣನೆ: ಕಡತಕೆ ಸೀಮಿತವಾದ ಸರ್ಕಾರದ ನಿರ್ದೇಶನಗಳು

0

ಶರಣಬಸವ ಕಟ್ಟಿಮನಿ

ಕೊಪ್ಪಳ: ನವೆಂಬರ್ ಮಾಹೆಯಲ್ಲಿನ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಾಜ್ಯ ಸರ್ಕಾರವು ಹಲವಾರು ನಿರ್ದೇಶನಗಳನ್ನು ಹಾಗೂ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಕನ್ನಡ ರಾಜ್ಯೋತ್ಸವಕ್ಕೆ ಮೆರಗು ನೀಡುವ ಕೆಲಸಕ್ಕೆ ಮುಂದಾಗಿತ್ತು. ಇದು ಕೇವಲ ಕಡತಗಳಿಗೆ ಮಾತ್ರ ಸೀಮಿತವಾಯಿತೆ ಎನ್ನುವ ಮಾತು ಹಲವೆಡೆ ಹರಿದಾಡುತ್ತಿದೆ.

ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಲವಾರು ಯೋಜನೆಗಳನ್ನು ಜಾರಿ ಮಾಡಿತ್ತು. ಅದರಲ್ಲಿ ಮಾತಾಡ್ ಮಾತಾಡ್ ಕನ್ನಡ ಸೇರಿದಂತೆ ಹಲವು ಯೋಜನೆಗಳು ಒಳಗೊಂಡಿದ್ದವು. ಆದರೆ ಈ ಯೋಜನೆಗಳು ಕೇವಲ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿದ್ದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಕೊಪ್ಪಳ ಜಿಲ್ಲಾ ಕೇಂದ್ರವಾದ ಕೊಪ್ಪಳ ನಗರದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ತಾಲೂಕು ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಯೊಂದರ ನಾಮಫಲಕದಲ್ಲಿ (ಲಸ್ಸಿ ಮ್ಯಾಜಿಕ್) ಕನ್ನಡದ ಒಂದು ಅಕ್ಷರ ನೋಡಲು ಕಾಣಸಿಗದು. ಹೀಗೆ ತಾಲೂಕಾ ಕ್ರೀಡಾಂಗಣ ವಾಣಿಜ್ಯ ಸಂಕೀರ್ಣದ ಮಳಿಗೆಗಳ ಕಥೆ ಹೆಚ್ಚು ಕಡಿಮೆ ಇದೇ ರೀತಿಯಾಗಿದೆ. ನಾಮಫಲಕಗಳಲ್ಲಿ ಕನ್ನಡವನ್ನು ಕಡಗಣನೆ ಮಾಡಿದೆ. ಒಂದು ಜವಾಬ್ದಾರಿಯುತ ಆಡಳಿತ ವ್ಯವಸ್ಥೆಯಲ್ಲಿ ಈ ರೀತಿ ಕನ್ನಡವನ್ನು ಕಡಗಣೆನೆ ಮಾಡುತ್ತಿರುವುದು ತೀವ್ರ ಶೋಚನೀಯ.

ಕೇವಲ ಆದಾಯದ ದೃಷ್ಟಿಯಿಂದ ಮಳಿಗೆಗಳನ್ನು ಪ್ರಾರಂಭಿಸಿರುವ ಸಂಬಂಧಪಟ್ಟ ಇಲಾಖೆಗಳು ಮಳಿಗೆ ನೀಡುವ ಸಂದರ್ಭದಲ್ಲಿ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡುವುದನ್ನು ಮರೆತಿರುವಂತೆ ಕಾಣುತ್ತಿದೆ. ಇಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕುರುಡುತನ ಪ್ರದರ್ಶಿಸುತ್ತಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ.

ಸರ್ಕಾರಿ ಸಂಕೀರ್ಣಗಳಲ್ಲಿರುವ ಮಳಿಗೆ ಅಂಗಡಿಗಳಿಗೂ ಸರಿಯಾದ ನಾಮಫಲಕಗಳ ನಿಯಮಗಳನ್ನು ತಿಳಿಸದಿರುವುದು ವಿಪರ್ಯಾಸ. ಅಲ್ಲದೆ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಇಂಗ್ಲೀಷ್ ಭಾಷೆಯದ್ದೇ ಪಾರಫಥ್ಯ ಮೇರೆದಿದೆ. ಪ್ರತಿ, ಅರ್ಜಿ, ಮಾಹಿತಿಗಳ ಪತ್ರಗಳ ಲೇವಾದೇವಿ ಇಂಗ್ಲೀಷ್ ನಲ್ಲೆ. ಕೇವಲ ಕನ್ನಡ ಭಾಷೆ ಇಲ್ಲಿ ನೆಪಮಾತ್ರ. ಕನ್ನಡ ನೆಲ, ಜಲ, ಭಾಷೆಯನ್ನು ಇತರರು ಆರಾಧಿಸಿ, ಅಭಿನಂದಿಸುತ್ತಿರುವ ಇಂದಿನ ದಿನಮಾನದಲ್ಲಿ ನಮ್ಮಲ್ಲಿ ಕನ್ನಡ ಪ್ರೇಮ ಕಡಿಮೆ ಯಾಗುತ್ತಿರುವುದು ವಿಪರ್ಯಾಸ. ಇಂದು ಕನ್ನಡ ರಾಜೋತ್ಸವ ದಿನವಾದರೂ ಇಂತಹ ಸಣ್ಣಪುಟ್ಟ ಬದಲಾವಣೆಗಳನ್ನು ಸರ್ಕಾರ ಕಡ್ಡಾಯಗೊಳಿಸಬೇಕಿದೆ.

Get real time updates directly on you device, subscribe now.

Leave A Reply

Your email address will not be published.

Don`t copy text!