ಬೆಂಗಳೂರು ಮತ್ತು ಮೈಸೂರಿನಲ್ಲಿ ಸ್ಟಾರ್ಟ್-ಅಪ್ “ಅಲ್ಸರ್ವ್”

0

ಬೆಂಗಳೂರು: ಆಲ್ಸರ್ವ್- ಹಿರಿಯ ನಾಗರಿಕರ ಜೀವನಕ್ಕೆ ನೆರವು ಒದಗಿಸುವ ತಮಿಳುನಾಡು ಟೆಕ್ ಸ್ಟಾರ್ಟ್-ಅಪ್ ಮತ್ತು ರಿಯಲ್-ಎಸ್ಟೇಟ್ ಅಲ್ಲದ ಅಲ್ಸರ್ವ್ ಕಂಪನಿ ಇಂದು ತನ್ನ ಕಾರ್ಯವ್ಯಾಪ್ತಿಯನ್ನು ಬೆಂಗಳೂರು ಮತ್ತು ಮೈಸೂರಿನಲ್ಲೂ ವಿಸ್ತರಿಸುವುದಾಗಿ ಘೋಷಿಸಿದೆ.

ಕಳೆದ ಎರಡು ವರ್ಷಗಳಿಂದ ಚೆನ್ನೈ, ಕೊಚ್ಚಿ, ತ್ರಿವೇಂಡ್ರಮ್ ಮತ್ತು ಕೊಯಿಂಬತೂರಿನಲ್ಲಿ ತನ್ನ ವ್ಯಾಪ್ತಿ ವಿಸ್ತರಿಸಿರುವ ಅಲ್ಸರ್ವ್, ಕೋವಿಡ್ ಸಂದರ್ಭದಲ್ಲಿ ಬಂದ ಭಾರಿ ಬೇಡಿಕೆ ಹಿನ್ನೆಲೆಯಲ್ಲಿ ಕರ್ನಾಟಕಕ್ಕೂ ಸೇವೆಯನ್ನು ತಲುಪಿಸಲು ನಿರ್ಧರಿಸಿದೆ.

ಒಂದು ಅಧ್ಯಯನದ ಪ್ರಕಾರ, ರಾಜ್ಯದ ಎಲ್ಲಾ 30 ಜಿಲ್ಲೆಗಳ ಪೈಕಿ ಬೆಂಗಳೂರು ಜಿಲ್ಲೆ, ಸರಾಸರಿ 12 ಲಕ್ಷ ಹಿರಿಯ ನಾಗರಿಕರೊಂದಿಗೆ ಅತಿ ಹೆಚ್ಚು ಹಿರಿಯ ನಾಗರಿಕರು ನೆಲೆಸಿರುವ ಜಿಲ್ಲೆಯಾಗಿದೆ. ಇದಲ್ಲದೆ, ಭಾರತದ ಲಾಂಜಿಟ್ಯೂಡಿನಲ್ ಏಜಿಂಗ್ ಅಧ್ಯಯನ(2020)ದ ಪ್ರಕಾರ, 2050ರ ವೇಳೆಗೆ ಬಾರತದ ಹಿರಿಯ ನಾಗರಿಕರ ಸಂಖ್ಯೆ 319 ಮಿಲಿಯನ್ಗೆ ತಲುಪಲಿದೆ. ನಗರ ಪ್ರದೇಶಗಳಲ್ಲಿ ಏಕಾಂಗಿಯಾಗಿ ವಾಸಿಸುವ ವಯಸ್ಕ ದಂಪತಿ (ಕುಟುಂಬದೊಂದಿಗೆ ವಾಸಿಸುವವರಿಗೆ ಹೋಲಿಸಿದರೆ) ಹೆಚ್ಚು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಅವರಿಗೆ ಸುಲಭವಾಗಿ ಒಂದು ಸ್ಥಳದಿಂದ ಇನ್ನೊಂದಕ್ಕೆ ಸಾಗಲು ಕಷ್ಟವಾಗುತ್ತದೆ.

ಪ್ರಸ್ತುತ ತಮಿಳುನಾಡು ಹಾಗೂ ಕೇರಳದ 900ಕ್ಕೂ ಹೆಚ್ಚು ಕುಟುಂಬಗಳು ಅಲ್ಸವ್ರ್ನ ಹೋಂಕೇರ್ ಸೇವೆಗಳ ಲಾಭ ಪಡೆಯುತ್ತಿವೆ. ಅಲ್ಸವ್ರ್ನ ಪ್ರಮುಖ ಸೇವೆಗಳೊಂದಿಗೆ, ಭದ್ರತೆ, ಹೌಸ್ಕೀಪಿಂಗ್ ಮತ್ತು ನಿರ್ವಹಣೆ, ಆಹಾರ ಮತ್ತು ವಿತರಣೆ, ಆರೋಗ್ಯ ಮತ್ತು ವೈದ್ಯಕೀಯ ಸೇವೆ ಮತ್ತು ಆರೈಕೆ ಮಾಡುವ ವ್ಯಕ್ತಿಯಂತಹ ಸೇವೆಗಳನ್ನು ಕೂಡ ಒಳಗೊಂಡಿದೆ. ಅಲ್ಸರ್ವ್ ಈ ಎಲ್ಲಾ ಪ್ರಮುಖ ಸೇವೆಗಳನ್ನು ಬೆಂಗಳೂರಿನಲ್ಲಿ ಕೂಡ ಒದಗಿಸುತ್ತದೆ. ಈ ಸ್ಟಾರ್ಟ್‍ಅಪ್ ಕಂಪನಿ ಬೆಂಗಳೂರು ಹಾಗೂ ಮೈಸೂರಿನ 75ಕ್ಕಿಂತ ಹೆಚ್ಚು ನಂಬಿಕಸ್ತ ವೆಂಡರ್ಗಳೊಂದಿಗೆ ಸಹಯೋಗ ಹೊಂದಿದೆ.

ಸಾಂಕ್ರಾಮಿಕದ ವೇಳೆ, ಅಲ್ಸರ್ವ್ ತನ್ನ ಗ್ರಾಹಕರಿಗೆ ಅನೇಕ ಕೋವಿಡ್ ಪರಿಹಾರ ಉಪಕ್ರಮಗಳನ್ನು ಆರಂಭಿಸಿತ್ತು ಮತ್ತು ಇದರಿಂದ ಅದರ ಚಂದಾದಾರರ ಸಂಖ್ಯೆ 500% ಹೆಚ್ಚಾಗಿತ್ತು. ಈ ಉಪಕ್ರಮ 300ಕ್ಕೂ ಹೆಚ್ಚು ಚಂದಾದಾರರಿಗೆ ನೆರವು ಒದಗಿಸಿತ್ತು.

ಉದಾಹರಣೆಗೆ, ಇದು ಘೋಷಿಸಿದ ‘ಅಲ್ಸರ್ವ್ ಪ್ರೈಮ್’ ಉಪಕ್ರಮ ಒಂದು ಆಧುನಿಕ ಕುಟುಂಬಕ್ಕೆ ಮನೆಯಲ್ಲಿಯೇ ಅಗತ್ಯವಿರುವ ಸಂಪೂರ್ಣ-ಸೇವೆ ಒದಗಿಸುವ ಯೋಜನೆಯಾಗಿದೆ. ಇದರ ಬೆನ್ನಲ್ಲೇ ‘ಕೋವಿಡ್ ಕೇರ್’ ಮತ್ತು ‘ಅಲ್ಸರ್ವ್ ಸೇಫ್-ಅಟ್-ಹೋಂ’ ಉಪಕ್ರಮಗಳನ್ನು ಕೂಡ ಆರಂಭಿಸಲಾಗಿದೆ. ಇದು ಕೋವಿಡ್ ಐಸೊಲೇಷನ್ ಅವಧಿ ಪೂರ್ಣಗೊಂಡ ನಂತರ ಮನೆಗಳ ವೃತ್ತಿಪರ ಸಂಪೂರ್ಣ ಆಳವಾದ ಸ್ವಚ್ಛತೆ, ಸೋಂಕು ನಿವಾರಕ ಸಿಂಪಡಣೆ ಮತ್ತು ಸ್ಯಾನಿಟೈಸೇಷನ್ ಸೇವೆಗಳನ್ನು ಒಳಗೊಂಡಿದೆ.

ಸ್ಟಾರ್ಟ್‍ಅಪ್ ಕಂಪನಿಯ ವಿಸ್ತರಣೆಯ ಕುರಿತು ಮಾತನಾಡಿದ ಅಲ್ಸವ್ರ್ನ ಸಹ-ಸಂಸ್ಥಾಪಕ ಮತ್ತು ನಿರ್ದೇಶಕ ಜಗದೀಶ್ ರಾಮಮೂರ್ತಿ, “ಬೆಂಗಳೂರು ಮುಂದಿನ ದಿನಗಳಲ್ಲಿ ಹೆಚ್ಚಿನ ಹಿರಿಯ ನಾಗರಿಕರಿಗೆ ಆಶ್ರಯತಾಣವಾಗಲಿದೆ. ಬೆಂಗಳೂರು ಮತ್ತು ಮೈಸೂರು ಸುತ್ತಮುತ್ತಲಿನ ನಿವೃತ್ತ ಸಮುದಾಯಗಳಲ್ಲಿ 350ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗುತ್ತಿದೆ. ನಮ್ಮ ಅಧ್ಯಯನದ ಪ್ರಕಾರ ತಿಳಿದುಬಂದಿರುವುದು ಏನೆಂದರೆ, ಹಿರಿಯ ನಾಗರಿಕರು ನಗರದ ಹೃದಯಭಾಗದಲ್ಲಿ ವಾಸಿಸಲು ಬಯಸುತ್ತಾರೆ, ಅಲ್ಲಿ ಅವರು ನಗರದ ಹವಾಮಾನ, ಉದ್ಯಾನವನಗಳು ಮತ್ತು ಜೀವನಶೈಲಿಯನ್ನು ಉತ್ತಮವಾಗಿ ಆನಂದಿಸಬಹುದು ಮತ್ತು ಉತ್ತಮ ಆರೋಗ್ಯ ಸೌಲಭ್ಯ ಮತ್ತು ಮನರಂಜನಾ ತಾಣಗಳ ಆಯ್ಕೆ ಹೊಂದಿರುತ್ತದೆ. ಅಲ್ಸವ್ನೊರ್ಂದಿಗೆ, ಹಿರಿಯರು ಈ ಎಲ್ಲಾ ಸೇವೆಗಳನ್ನು ಮನೆಯಲ್ಲಿಯೇ ಕೈಗೆಟುಕುವ ವೆಚ್ಚದಲ್ಲಿ ಪಡೆಯಬಹುದು” ಎಂದರು.

Get real time updates directly on you device, subscribe now.

Leave A Reply

Your email address will not be published.

Don`t copy text!