ರೇಷ್ಮೆ ಬೆಳೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ತೂಬಗೆರೆ ಹೋಬಳಿಯಮಹಿಳೆ

0

ವರದಿ: ಗಂಗರಾಜು.ಎನ್.

ದೊಡ್ಡಬಳ್ಳಾಪುರ: ನಾಳೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಇಂತಹ ಸಂದರ್ಭದಲ್ಲಿ ಇಲ್ಲೊಬ್ಬ ರೈತ ಮಹಿಳೆ ಉತ್ತಮ ಸಾಧನೆ ಮಾಡಿದ್ದಾರೆ.

ರೇಷ್ಮೆ ಬೆಳೆಗಾರರು ಅತಿ ಕಡಿಮೆ ಇರುವ ದೊಡ್ಡಬಳ್ಳಾಪುರಕ್ಕೆ ೨೦೨೦-೨೧ ಸಾಲಿನ ರಾಜ್ಯ ಮಟ್ಟದ ಪ್ರಗತಿ ಪರ ಮಹಿಳಾ ರೇಷ್ಮೆ ಬೆಳೆಗಾರರು ವಿಭಾಗದಿಂದ ದೊಡ್ಡಬಳ್ಳಾಪುರ ತೂಬಗೆರೆ ಹೋಬಳಿ ಸೀಗೆಹಳ್ಳಿ ಗ್ರಾಮದ ರತ್ನಮ್ಮ ರಾಮಯ್ಯ ಅವರಿಗೆ ರಾಜ್ಯ ಮಟ್ಟದ ಪ್ರಥಮ ಪ್ರಶಸ್ತಿ ಸಂದಿರುವುದು ಹುಬ್ಬೇರಿಸುವಂತೆ ಮಾಡಿದೆ. ಇದರೊಂದಿಗೆ ಶುಕ್ರವಾರವಷ್ಟೇ ಸಿ.ಎಂ. ಬಸವರಾಜ ಬೊಮ್ಮಾಯಿಯವರು ಘೋಷಿಸಿದ ಬಜೆಟ್ ನಲ್ಲಿ ದೇವನಹಳ್ಳಿ ಯಲ್ಲಿ ರೇಷ್ಮೆ ಮೊಟ್ಟೆ ಶೈತ್ಯಗಾರಕ್ಕೆ ಹಣ ಮೀಸಲಿಟ್ಟಿರುದ್ದಾರೆ ಅದರ ಬೆನ್ನಲ್ಲೇ ಕಸಬಾ ಹೋಬಳಿ ಮರಳೇನಹಳ್ಳಿ ಗ್ರಾಮದ ತಿಮ್ಮರಾಜು ಗಂಗಪ್ಪ ಅವರು ಪುರುಷ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ದ್ವಿತೀಯ ಸ್ಥಾನವನ್ನು ಪಡೆದುಕೊಂಡು ದೊಡ್ಡಬಳ್ಳಾಪುರ ತಾಲೂಕಿಗೆ ಗೌರವ ತಂದುಕೊಟ್ಟಿದ್ದಾರೆ.
ನಂದಿ ಬೆಟ್ಟ, ಚನ್ನರಾಯಸ್ವಾಮಿ ಬೆಟ್ಟದ ಸಾಲಿನಲ್ಲಿ ಬರುವ ಸೀಗೆಹಳ್ಳಿ ಗ್ರಾಮದ ರತ್ಮಮ್ಮ ರಾಮಯ್ಯ ರಾಜ್ಯ ಮಟ್ಟದ ಸಾಧನೆ ಮಾಡಿ ದೊಡ್ಡಬಳ್ಳಾಪುರ ತಾಲೂಕಿಗೆ ಮಾದರಿಯಾಗಿದ್ದಾರೆ. ೨೦೨೦-೨೧ನೇ ಸಾಲಿನಲ್ಲಿ ಕೇವಲ ಒಂದು ಎಕರೆ ಪ್ರದೇಶದಲ್ಲಿ ವಾರ್ಷಿಕವಾಗಿ ಉತ್ಪದನಾ ವೆಚ್ಚವನ್ನು ಹೊರತುಪಡಿಸಿ ೩.೮೩ ಲಕ್ಷ ರೂಪಾಯಿ ಲಾಭ ಪಡೆಯುತ್ತಿದ್ದಾರೆ. ರೈತರು ಸಾಲ ಮಾಡಿ ಆತ್ಮಹತ್ಯೆಗಳನ್ನು ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಇಂತಹ ಸಾಧಕ ರೈತರು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು, ರೇಷ್ಮೆ ಇಲಾಖೆ ಅಧಿಕಾರಿಗಳ ಸಲಹೆಗಳನ್ನು ಚಾಚು ತಪ್ಪದೆ ಪಾಲಿಸುವ ಮೂಲಕ ನಮ್ಮನ್ನು ನಾವು ಸಮರ್ಥವಾಗಿ ಆರ್ಥಿಕವಾಗಿ ಕಟ್ಟಿಕೊಳ್ಳಬಹುದೆಂಬ ಅವರ ಸಾಧನೆ, ಎಲ್ಲಾ ರೈತರಿಗೂ ಮಾದರಿಯಾಗಬೇಕಿದೆ. ಅದೇ ರೀತಿ ದೊಡ್ಡಬಳ್ಳಾಪುರದ ಕಸಬಾ ಹೋಬಳಿ ಮರಳೇನಹಳ್ಳಿ ತಿಮ್ಮರಾಜು ಗಂಗಪ್ಪ ೨೦೨೦-೨೧ ನೇ ಸಾಲಿನಲ್ಲಿ ೧ ಎಕರೆಯಲ್ಲಿ ರೇಷ್ಮೆ ಕೃಷಿ ಮಾಡಿಕೊಂಡು, ವಾರ್ಷಿಕ ಸುಮಾರು ೫ ಬೆಳೆಗಳನ್ನು ಬೆಳೆಯುತ್ತಾ ವಾರ್ಷಿಕವಾಗಿ ೩.೫ ಲಕ್ಷ ರೂಪಾಯಿಗಳಷ್ಟು ಲಾಭ ಗಳಿಸಿದ್ದಾರೆ.

ರಾಜ್ಯಮಟ್ಟದ ಪ್ರಥಮ ಪ್ರಶಸ್ತಿ ಪುರಸ್ಕೃತೆ ರತ್ನಮ್ಮ ರಾಮಯ್ಯ ಮಾಹಿತಿ ನೀಡಿ, ಕಳೆದ ೨೫ ವರ್ಷದಿಂದ ರೇಷ್ಮೆ ಕೃಷಿಯನ್ನು ಮಾಡಿಕೊಂಡುಬಂದಿದ್ದೇವೆ. ೧೦ ವರ್ಷಗಳ ಹಿಂದೆ ಪ್ರತಿ ಕೆಜಿಗೂ ೧೫೦ರಿಂದ ೩೦೦ ರೂಪಾಯಿಗಳ ಬೆಲೆ ಇತ್ತು. ಕೆಳೆದ ೧೦ ವರ್ಷಗಳ ನಂತರ ರೇಷ್ಮೆ ಇಲಾಖೆಯ ಸಹಯೋಗದಿಂದ ರೇಷ್ಮೆ ಕೃಷಿ ಲಾಭದಾಯಕವಾಗಿದೆ. ಶೇಕಡ ೧೦೦ ಕ್ಕೂ ಹೆಚ್ಚು ಇಳುವರಿಯನ್ನು ಪ್ರಸ್ತುತ ಪಡೆಯುತ್ತಿದ್ದೇವೆ. ಪ್ರಸ್ತುತ ೯೦೦ ರೂಪಾಯಿಗಳ ವರೆಗೆ ಪ್ರತಿ ಕೆಜಿಗೆ ದಾರಣೆ ಇದೆ. ಈ ಹಿಂದೆ ರೇಷ್ಮೆ ಇಲಾಖೆ ಬಗ್ಗೆ ನಮಗೆ ತಿಳಿದಿರಲ್ಲಿ ರೇಷ್ಮೆ ಇಲಾಖೆ ಸಹಕಾರ ಸಿಕ್ಕ ನಂತರ ಹಿಪ್ಪು ನೇರಳೆ ಬೆಳೆಯಲು ನರೇಗದಿಂದ ಸಹಾಯ ದನ, ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕೆ ಸಹಾಯ ದನ ಇಲಾಖೆಯಿಂದ ದೊರೆತಿದೆ. ಇದರಿಂದ ವರ್ಷಕ್ಕೆ ಸುಮಾರು ೧೧ ಬೆಳೆಗಳನ್ನು ಬೆಳೆಯಲು ಸಾಧ್ಯವಾಗಿದೆ. ಈ ರೀತಿ ಸರ್ಕಾರದಿಂದ ದೊರೆಯುವ ಸರ್ಕಾರದ ಸಹಾಯ ದನವನ್ನು ಪಡೆಯುವುದು ಮುಖ್ಯವಲ್ಲ, ಇದನ್ನು ಸಮರ್ಪಕವಾಗಿ ಬೆಳೆಸಿಕೊಳ್ಳುವಲ್ಲಿ ಶ್ರಮ, ಶ್ರದ್ದೆಯಿಂದ ಕಾರ್ಯ ನಿರ್ವಹಿಸಿದರೆ ಫಲ ಖಂಡಿತಾ ಸಿಗುತ್ತದೆ. ಇದಕ್ಕೆ ಉದಾಹರಣೆ ನಮಗೆ ದೊರೆತ ರಾಜ್ಯ ಮಟ್ಟದ ಪ್ರಥಮ ಪ್ರಶಸ್ತಿಯೆ ನಿದರ್ಶನವಾಗಿದೆ.

ದೊಡ್ಡಬಳ್ಳಾಪುರ ತಾಲ್ಲೂಕು ರೇಷ್ಮೆ ಸಹಾಯಕ ನಿರ್ದೇಶಕರಾದ ಉದಯ ಮಾತನಾಡಿ, ೨೦೧೬-೧೭ ರಿಂದ ರತ್ನಮ್ಮ ರಾಮಯ್ಯ ಮಹಿಳಾ ರೇಷ್ಮೆ ಪ್ರಗತಿಪರ ರೈತರಾಗಿ ರಾಜ್ಯ ಮಟ್ಟದ ಪ್ರಥಮ ಪ್ರಶಸ್ತಿ ಪಡೆದುಕೊಂಡಿದ್ದಾರೆ. ೧೦೦ ದ್ವಿತಳಿ ಮೊಟ್ಟೆಗೆ ೧೦೦೦ರೂಪಾಯಿಗಳಷ್ಟು ಸಹಾಯ ದನ ಪಡೆಯುತ್ತಿದ್ದು, ೩.೧೦ ಎಕರೆ ಭೂಮಿಯ ಪೈಕಿ, ೧ ಎಕರೆ ಭೂಮಿಯಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ಹಿಪ್ಪು ನೇರಳೆ ಬೆಳೆಯಲು ನರೇಗದಲ್ಲಿ ಸಹಾಯ ದನ, ಹುಳು ಸಾಕಾಣಿಕೆ ಸಲಕರಣೆ, ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕೂ ಸಹಾಯ ದನ ಪಡೆದಿದ್ದಾರೆ. ಈ ಮೂಲಕ ವಾರ್ಷಿಕವಾಗಿ ೧೦ಕ್ಕೂ ಹೆಚ್ಚು ಬೆಳೆಗಳನ್ನು ಅವರು ಬೆಳೆಯುವ ಮೂಲಕ ಶೇಕಡ ೧೦೦ಕ್ಕೂ ಹೆಚ್ಚು ಇಳುವರಿ ಪಡೆಯುವ ಮೂಲಕ ರಾಜ್ಯದಲ್ಲೆ ಪ್ರಥಮ ಪ್ರಶಸ್ತಿಗೆ ಬಾಜನರಾಗಿದ್ದಾರೆ. ದೊಡ್ಡಬಳ್ಳಾಪುರ ರೇಷ್ಮೆ ಇಲಾಖೆ ಮತ್ತು ಜಿಲ್ಲಾ ರೇಷ್ಮೆ ಇಲಾಖೆ ಹೆಮ್ಮೆ ವ್ಯಕ್ತಪಡಿಸುತ್ತಿದೆ. ಇಲಾಖೆಯ ತಾಂತ್ರಿಕ ವರ್ಗ ತಾಲೂಕಿ ರೇಷ್ಮೆ ಬೆಳೆಗಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ೨೦೨೦-೨೧ನೇ ಸಾಲಿನಿಂದ ರೇಷ್ಮೆ ಬೆಳೆಗಾರರು ದೊಡ್ಡಬಳ್ಳಾಪುರದಲ್ಲಿ ಹೆಚ್ಚುತ್ತಿದ್ದು, ಪ್ರಸ್ತುತ ದೊಡ್ಡಬಳ್ಳಾಪುರ ತಾಲೂಕಿನ ೩೫ ಹೆಕ್ಟೇರ್‌ನಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ರೇಷ್ಮೆ ಬೆಳೆಯಿಂದ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದ್ದು, ರೈತರು ರೇಷ್ಮೆ ಕೃಷಿ ಕಡೆಗೆ ಮುಖ ಮಾಡಿ ಎಂದು ಮನವಿ ಮಾಡಿದರು.

Get real time updates directly on you device, subscribe now.

Leave A Reply

Your email address will not be published.

Don`t copy text!