ವಿಶ್ವ ಸಾಮಾಜಿಕ ಕಾರ್ಯ ದಿನ-2022

0

-ದುರುಗೇಶ್ ಪೂಜಾರ್

ಸೋಶಿಯಲ್ ವರ್ಕರ್ ಡಾ.ಸಂತೋಷ್ ಕುಮಾರ್ ರವರ ಬಗ್ಗೆ ಲೇಖನ
ಸ್ನೇಹಿತರೇ ಸತತ ಪರಿಶ್ರಮ ಹಾಗೂ ದೃಡ ಸಂಕಲ್ಪದಿoದ ಏನಾನ್ನಾದರು ಕೂಡ ಸಾಧಿಸಬಹುದು. ಜೀವನದಲ್ಲಿ ಎಲ್ಲಾವನ್ನು ಮೆಟ್ಟಿ ನಿಂತು ಸಾಧನೆಗೈದವರನ್ನು ಬೇದಕುತ್ತ ಹೋದಂತೆ ಸಾವಿರಾರು ಜನರು ಎಲೆಮರೆ ಕಾಯಿಯಂತೆ ಅವಿತು ಕೂತಿದ್ದಾರೆ. ಅಂತವರ ಒಳ್ಳೆಯಕಾರ್ಯವನ್ನು ಮತ್ತು ಅಂತವರನ್ನು ಸಮಾಜಕ್ಕೆ ಪರಿಚಯಿಸುವ ಕೆಲಸವನ್ನು ಮಾಡುವ ಕಡೆಗೆ ನಮ್ಮ ಪಯಣ ಸಾಗುತ್ತಿದೆ.

ನಾನು ಯಾಕೆ ಈ ರೀತಿಯಾಗಿ ಹೇಳುತ್ತಿದ್ದೇನೆ ಎಂದು ಆರ್ಶ್ಚಯವಾಗುತ್ತಿರಬಹುದು,ಹೌದು ಖಂಡಿತ ಎಲ್ಲರಿಗೂ ಹಾಗೆಯೇ ಅನಿಸುತ್ತದೆ. ನಾನು ಹೇಳುವುದಕ್ಕೂ ಒಂದು ವಿಶೇಷವಿದೆ. ಇದೇ ಮಾರ್ಚ್ 15 ತಂದು ವಿಶ್ವ ಸಾಮಾಜಿಕ ಕಾರ್ಯ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ವರ್ಷದ ಘೋಷಣೆ:- “ಹೊಸ ಪರಿಸರ – ಸಾಮಾಜಿಕ ಪ್ರಪಂಚವನ್ನು ಸಹ-ನಿರ್ಮಾಣ ಮಾಡುವುದು : ಯಾರನ್ನು ಹಿಂದೆ ಬಿಡಬೇಡಿ ಎಂಬ ಘೋಷಣೆಯೊಂದಿಗೆ ವಿಶ್ವದಾದ್ಯಂತ ಎಂ.ಎಸ್.ಡಬ್ಲೂö್ಯ ಮಾಡಿರುವಂತಹ ಪ್ರೋಫೆಶನಲ್ ಸೋಶಿಯಲ್ ವರ್ಕರ್‌ಗಳು ಎಲ್ಲಾ ಕ್ಷೇತ್ರದಲ್ಲಿಯೂ ಕೂಡ ಸಾಮಾಜಿಕವಾಘಿ ಬೆಂಬಲವನ್ನು ನೀಡಲು ಕೈಜೋಡಿಸಿ ಕಾರ್ಯವನ್ನು ಮಾಡುತ್ತಿರುತ್ತಾರೆ.

ಹಾಗೆಯೇ ನಮ್ಮ ನಡುವೆ ಲಕ್ಷಾಂತರ ಕೋಟ್ಯಾಂತರ ಜನ ಸಾಮಾಜಿಕ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿರುತ್ತಾರೆ. ಅದರಂತೆ ಒಬ್ಬರು ಸಾಮಾಜಿಕ ಕ್ಷೇತ್ರದಲ್ಲಿ ಕಿಚ್ಚನ್ನು ಹಚ್ಚುತ್ತಿರುವ ಒಬ್ಬ “ಸೋಶಿಯಲ್ ಸೋಲ್ಜರ್” ದಾವಣಗೆರೆ ಜಿಲ್ಲೆಯಲ್ಲಿ ಇದ್ದಾರೆ, ಇಲ್ಲಿ ಹೇಳಲು ಹೊರಟಿರುವ ವ್ಯಕ್ತಿ ಮತ್ತು ವ್ಯಕ್ತಿತ್ವವನ್ನು ಒಂದು ಸಲ ನಿಮಗೆ ಪರಿಚಯಿಸಬೇಕೆಂಬ ಹಂಬಲ ನನ್ನದು, ಮೊದಲು ನಡೆಯುವುದನ್ನು ಕಲಿಯಬೇಕು, ನಂತರ ನಿಧಾನವಾಗಿ ಓಡುವುದನ್ನು ಕಲಿಯಬೇಕು, ತದನಂತರ ಮೊಗದ ಓಟ ತಂತಾನೆ ಅಭ್ಯಾಸವಾಗಿಬಿಡುತ್ತದೆ, ಎನ್ನುವಂತಹ ತತ್ವವನ್ನು ಸಮಾಜಕ್ಕೆ ಸಾರುವಂತಹ ಕೆಲಸವನ್ನು ಈ ವ್ಯಕ್ತಿ ಸತತ ಹತ್ತು ವರ್ಷಗಳಿಂದ ಮಾಡುತ್ತ ಬಂದಿದ್ದಾರೆ, ಅವರೇ “ ಡಾ.ಸಂತೋಷ್ ಕುಮಾರ್ ಎಂ” ಸೈಕಿಯಾಟ್ರಿಕ್ ಸೋಶಿಯಲ್ ವರ್ಕರ್ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ದಾವಣಗೆರೆ

ಇವತ್ತಿನ ದಿನಮಾನಗಳಲ್ಲಿ ಸಮಾಜ ಕಾರ್ಯದ ಗಾಂಬಿರ್ಯತೆ ಮತ್ತು ಅದರ ಕಾರ್ಯಕ್ಷಮತೆ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವತ್ತಾ ಹಾಗೂ ವೃತ್ತಿಪರ ಎಂದರೇ ಏನು? ಎಂಬುದನ್ನು ಯುವ ಪೀಳಿಗೆಗೆ ಮನದಟ್ಟು ಮಾಡುವಲ್ಲಿ ಹಗಲಿರುಳು ಎನ್ನದೇ ಶ್ರಮಿಸುತ್ತಿರುವುದು ಒಂದು ಶ್ಲಾಘನೀಯ ವಿಷಯವಾಗಿದೆ. ಈ ಮಾನವ ಸಮಾಜದಲ್ಲಿನ ಮನಸ್ಸುಗಳ ಸಂಬAಧವನ್ನು ಬೆಸೆಯುವಲ್ಲಿ ಹಾಗೂ ಆ ಉತ್ತಮವಾದ ಮನಸ್ಥಿತಿಯನ್ನು ಬೆಳೆಸುವಲ್ಲಿಯು ಕೂಡ ಒಂದು ಮಹತ್ತರವಾದ ಹೆಜ್ಜೆಯನ್ನು ಇಟ್ಟಿದ್ದಾರೆ. ಹಾಗೇಯೇ ಆರೋಗ್ಯ ಇಲಾಖೆಯಲ್ಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್ ಹುದ್ದೆಯನ್ನು ಅಲಂಕರಿಸಿ ಸಮಾಜ ಕಾರ್ಯದ ಗಾಂಭಿರ್ಯತೆಯನ್ನು ನಾಡಿನಾದಾದ್ಯಂತ ಪಸರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಮಾನಸಿಕ ಖಾಯಿಲೆಯಿಂದ ಬಳಲುತ್ತಿರುವಂತರವರ ಮನೆಗೆ ಸ್ವತಃ ಭೇಟಿ ನೀಡಿ ಅವರ ಆರೋಗ್ಯವನ್ನು ವಿಚಾರಿಸಿ ಮನೋವೈದ್ಯರ ಸಲಹೆ ಮೇರೆಗೆ ಔಷದೋಪಚಾರವನ್ನು ನೀಡಿ ಇನ್ನು ಗೊಂದಲದ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದರೆ ಅವರಿಗೆ ಆಪ್ತಸಮಾಲೋಚನೆಯ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಪ್ರಬಲವಾದ ಹೆಜ್ಜೆಯನ್ನಿಟ್ಟಿದ್ದಾರೆ, ಸರಕಾರದ ಸೌಲಭ್ಯಗಳಿಂದ ವಂಚಿತರಾದವರಿಗೆ ಸೌಲಭ್ಯಗಳು ದೊರೆಯುವಂತೆ ಮಾಡಿ ನಿರ್ಗತಿಕರ ಕಂಬನಿಗೆ ಆಸರೆಯಾಗಿದ್ದಾರೆ.

ಅದೆಷ್ಟೋ ಮಾನಸಿಕ ಅಸ್ವಸ್ಥರನ್ನು ಗುರುತಿಸಿ ಚಿಕಿತ್ಸೆಯನ್ನು ಕೊಡಿಸುವಂತಹ ಕಾರ್ಯವನ್ನು ದಾವಣಗೆರೆ ಜಿಲ್ಲಾದ್ಯಂತ ಮಾಡುತ್ತಿದ್ದಾರೆ. ನೊಂದವರಿಗೆ ನೆರವಾಗುವಂತಹ ಕೆಲಸವನ್ನು ದಿನನಿತ್ಯ ಮಾಡುತ್ತ ಬರುತ್ತಿದ್ದಾರೆ. ಇವತ್ತಿನ ದಿನಮಾನಗಳು ಹೇಗಾಗುತ್ತಿದೆ. ಅಂದರೆ ಪ್ರತಿಯೊಂದು ವಿಚಾರಕ್ಕೂ ಅನೇಕ ರೀತಿಯಾಂದAತಹ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡು ಆತ್ಮಹತ್ಯೆ ಎನ್ನುವಂತಹ ಹಾದಿಯನ್ನು ದಾಟುವ ಅದೆಷ್ಟೋ ಜನರ ಜೀವನವೇ ಸಾಕು ಎಂದು ಕೈಚಲ್ಲಿದವರನ್ನು ಮತ್ತೆ ಕೈ ಹಿಡಿದು ನಿನ್ನ ಜೀವನದಲ್ಲಿ ಇನ್ನು ಮಾಡುವ ಕೆಲಸ ತುಂಬಾ ಇದೆ ಎಂದು. ಎಂಬ ವಿಷಯವನ್ನು ಅವರಿಗೆ ಮನದಟ್ಟು ಮಾಡಿ ಬದುಕನ್ನು ಕಟ್ಟಿಕೊಡುವಂತಹ ಕೆಲಸವನ್ನ ಸಂತೋಷ್ ಕುಮಾರ್ ರವರು ಮಾಡುತ್ತಿದ್ದಾರೆ. ಯಾವ ಕಾಯಿಲೆ ಬಂದರು ಬೇಗ ಗುಣಮುಖರಾಗಿ ಜೀವನವನ್ನು ಸಾಗಿಸಿಬಿಡಬಹುದು, ಆದರೆ ಈ ಜೀವನವೇ ಬೇಡ ಎಂದು ಬೇಸತ್ತು ಕೂತವರನ್ನು ಮನಪರಿವರ್ತನೆ ಮಾಡುವುದು ಅಷ್ಟೋಂದು ಸುಲಭದ ಮಾತಲ್ಲ, ಇಂತಹ ಅನೇಕರ ಜೀವನವನ್ನು ಪುನಃ ಮೊದಲಿನಂತೆ ಪರಿವರ್ತಿಸಿ ನೊಂದ ಮನಸ್ಸುಗಳಿಗೆ ಬೆಳಕು ಚಲ್ಲಿದ್ದಾರೆ,
ದೊಡ್ಡವರು ಹೇಳುವಂತೆ “ಸಾಧನೆ ಎಂಬುದು ಸಾಧಕನ ಸ್ವತ್ತೇ” ಹೊರತು ಸೋಮಾರಿಯ ಸ್ವತ್ತಲ್ಲಾ” ಎಂಬ ಮಾತು ಅಕ್ಷರಶಹಃ, ನಿಜ ಯಾಕೆಂದರೆ ಎಲ್ಲರಲ್ಲೂ

ವಿವಿಧ ರೀತಿಯ ಕೌಶಲ್ಯವಿರುತ್ತದೆ. ಆ ಒಂದು ಕೌಶಲ್ಯವನ್ನು ಸಮಾಜಕ್ಕೆ ಯಾವ ರೀತಿ ಪರಿಚಯಸಬೇಕೆಂಬ ತಿಳುವಳಿಕೆಯುಳ್ಳವನು ಇಂತಹ ಮಹತ್ತರವಾದ ಸಾಧನೆಯನ್ನು ಮಾಡಲು ಸಾಧ್ಯ, ಅಂತಹ ಸಾಧಕರ ಸಾಲಿನ ಪಟ್ಟಿಯಲ್ಲಿ ಈ ವ್ಯಕ್ತಿ ಸೇರುತ್ತಾರೆ. ತುಂಬಾ ಸರಳ ಜೀವಿಯೂ ಕೂಡ ಹೌದು,
ನಾನು ಡಾ.ಸಂತೋಷ್ ಕುಮಾರ್ ಅವರನ್ನು ಸುಮಾರು 8 ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ ಸ್ನೇಹಕ್ಕೆ ಇವರಲ್ಲಿ ವಿಶೇಷವಾದ ಸ್ಥಾನವನ್ನೇ ಕಂಡಿದ್ದೇನೆ, ಸರಳತೆಯಲ್ಲಿ ಸರಳ, ನಿಷ್ಕಲ್ಮವಾದ ಮನಸ್ಸು, ಹೇಳುತ್ತಾ ಹೋದರೆ ಪದಗಳು ಕೂಡ ಬಡವನೆನಿಸಿಕೊಳ್ಳುತ್ತವೆ, ಅಂತಹ ವ್ಯಕ್ತಿತ್ವ, ಒಂದು ಉದಾಹರಣೆಯನ್ನು ನೋಡಬಹುದಾದರೆ ಸತ್ಯ, ಸರಳತೆ, ಪ್ರಮಾಣೀಕತೆ, ಶಾಸ್ತಿçÃಯ ಆಸ್ತಿ, ಲಾಲ್ ಬಹೂದ್ದೂರ್ ಶಾಸ್ತಿç ಅವರು ಭಾರತದ ಪ್ರಧಾನಿಯಾಗಿ ರಾಷ್ಟçದ ಗಡಿ, ಯೋಧರ ಮತ್ತು ಅನ್ನದಾತನ ಗೌರವ ಪ್ರತಿಷ್ಠೆಗಳನ್ನು ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯ ಮೂಲಕ ರೈತರಿಗೆ, ಯೊಧರಿಗೆ, ದೇಶಕ್ಕೆ ನೆಚ್ಚಿನ ಪ್ರಧಾನಿಯಾದ ವiಹಾನ್ ಚೇತನ, ಶಾಸ್ತಿçà ಜೀ. ಇವರಲ್ಲಿ ಇಂದತಹ ಸರಳತೆ ಮತ್ತು ಪ್ರಾಮಾಣೀಕತೆ ಇವತ್ತು ಇಡೀ ದೇಶವೇ ಕೊಂಡಾಡುತ್ತಿದೆ. ಇಂತಹ ಮಹಾನ್ ಚೇತನರ ಆದರ್ಶ ತತ್ವಗಳನ್ನು ಮೈಗೂಡಿಸಿಕೊಂಡು ಮಹತ್ತರವಾದ ಹೆಜ್ಜೆಯನ್ನು ಇಟ್ಟಿದ್ದಾರೆ. ನಮ್ಮ ಡಾ.ಸಂತೋಷ್ ಕುಮಾರ್.

ಇವರ ತಂದೆ ಎನ್.ಮಲ್ಲೇಶಪ್ಪ ಅವರು ಕಟ್ಟಿದಂತಹ ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿ ಇವತ್ತು ಇವರ ಪ್ರಾಮಾಣಿಕತೆ ಮತ್ತು ಸರಳತೆಯೇ ಈ ಸಂಸ್ಥೆಯು ಒಂದು ದೊಡ್ಡ ಹೆಮ್ಮರವಾಗಿ ಬೆಳೆಯುತ್ತಿದೆ. ಒಂದು ಸಲ ನೀವೆ ಊಹಿಸಿಕೊಳ್ಳಿ, ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸುವುದೆಂದರೆ ಇವತ್ತ್ತಿನ ಕಾಲದಲ್ಲಿ ಅಷ್ಟೋಂದು ಸುಲಭವಲ್ಲ ಈ ಒಂದು ಸಂಸ್ಥೆಯಿAದ ಪ್ರತಿವರ್ಷ ಅನೇಕ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಗುರುತಿಸಿ ಸ್ವತಹ ಡಾ.ಸಂತೋಷ್ ಕುಮಾರ್‌ರವರೇ ಪತ್ತೆ ಹಚ್ಚಿ ಅವರನ್ನು ಪೋನಿನ ಮೂಲಕ ಸಂಪರ್ಕಿಸಿ ಅವರಿಗೆ ವೇದಿಕೆಯನ್ನು ಕಲ್ಪಿಸಿ ಪ್ರಶಸ್ತಿ ಪ್ರದಾನ ಮಾಡುವುದರ ಮೂಲಕ ಆ ಪ್ರಶಸ್ತಿ ಪುರಸ್ಕೃತರ ಬೆನ್ನು ತಟ್ಟಿ ಇನ್ನು ದೊಡ್ಡಮಟ್ಟದ ಸಾಧನೆಮಾಡಿ ಎನ್ನುವ ಆಶಯದೊಂದಿಗೆ ಕರೆಯನ್ನು ಕೊಡುವುದರ ಮೂಲಕ ಕರ್ನಾಟಕದ ಯುವ ಪ್ರತಿಭೆಗಳಿಗೆ ಚಿರಪರಿಚಿತರಾಗಿ ಹೊರಹೊಮ್ಮುತ್ತಿದ್ದಾರೆ, ಇವರ ಸರಳತೆ ಮತ್ತು ಪ್ರಾಮಾಣಿಕತೆಯನ್ನು ಮೆಚ್ಚಿ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿಗಳನ್ನು ಪ್ರದಾನ ಮಾಡಿ ನಿಮ್ಮ ಸಾಧನೆ ಇನ್ನಷ್ಟು ಎತ್ತರಕ್ಕೆ ಸಾಗಲಿ ಎಂದು ತುಂಬು ಹೃದಯದಿಂದ ಹರಸಿವೆ.

ಇವತ್ತಿನ ಯುವ ಪೀಳಿಗೆಗೆ ಸ್ಪೂರ್ತಿಯ ಚಿಲುಮೆಯಾಗಿ ಹೊರಹೊಮ್ಮುತ್ತಿರುವುದು ಒಂದು ಸಂತಸದ ವಿಷಯವಾಗಿದೆ.

ಸಂತೋಷ್ ಕುಮಾರ್ ರವರು ಕೈಗೊಂಡಿರುವ ಸಾಮಾಜಿಕ ಕಾರ್ಯಗಳು ಸಮುದಾಯದಲ್ಲಿ ಮಾನಸಿಕ ಖಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವುದು
ನೊಂದವರಿಗೆ ನೆರವು ನೀಡುವುದು ಮನೆಭೇಟಿ ಕಾರ್ಯಕ್ರಮಗಳ ಜೊತೆಗೆ ಪೋಷಕರಿಲ್ಲದ ಮಾನಸಿಕ ಅಸ್ವಸ್ಥರನ್ನು ವಿಶೇಷ ಶಾಲೆಗಳು ಅಥವಾ ಪುರ್ನವಸತಿ ಕೇಂದ್ರಗಳಿಗೆ ಸೇರಿಸುವುದು ಗುಣಮುಖರಾದ ಮಾನಸಿಕ ಅಸ್ವಸ್ಥರಿಗೆ ಹೊಲಿಗೆ ಯಂತ್ರಗಳನ್ನು ನೀಡಿ ಮತ್ತು ಅವರಿಗೆ ತರಬೇತಿ ಕೊಡಿಸಿ ಅವರನ್ನು ಮುಖ್ಯವಾಹಿನಿಗೆ ತರುವುದಾಕ್ಕಾಗಿ ಶ್ರಮಿಸುವುದು ಕೋವಿಡ್ ಸಂದರ್ಭದಲ್ಲಿ ಮಾನಸಿಕ ಅಸ್ವಸ್ಥರ ಕುಟುಂಬಗಳಿಗೆ ಆಹಾರ ಧಾನ್ಯಗಳ ಪುಡ್ ಕಿಟ್ ವಿತರಣೆ ಮಾಡುವುದು ಕಾಲೇಜು ವಿದ್ಯಾರ್ಥಿಗಳಿಗೆ ಸ್ವರಕ್ಷಣೆಗಾಗಿ ಕರಾಟೆ ತರಬೇತಿಯನ್ನು ನೀಡುವುದು ಅಂಗವಿಕಲರಿಗೆ ಮತ್ತು ನಿರ್ಗತಿಕರಿಗೆ ಸಮವಸ್ತçವನ್ನು ವಿತರಿಸುವುದು ವಸತಿನಿಲಯದ ವಿದ್ಯಾಥಿಗಳಿಗೆ ವ್ಯಕ್ತಿತ್ವ ವಿಕಸನದ ಬಗ್ಗೆ ಅರಿವನ್ನು ಮೂಡಿಸುವುದು ಪ್ರತಿವರ್ಷ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಸಸಿಗಳ ವಿತರಣೆ ಮತ್ತು ನೇಡುವಿಕೆ ಸ್ವಾತಂತ್ರö್ಯ ಹೋರಾಟಗಾರರ ಪುತ್ಥಳಿಗಳ ಸ್ವಚ್ಚತಾದೋಂಲನಾ ಮಾಡುವಿಕೆ ಎಲೆಮರಿ ಕಾಯಿಯಂತೆ ಸಾಧನೆ ಮಾಡಿರುವಂತಹ ಸಾಧಕರುಗಳಿಗೆ ಪ್ರಶಸ್ತಿ ನೀಡುವುದು ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಸಾಧಕಿಯರಿಗೆ ಸನ್ಮಾನಿಸುವುದು ಸುಮಾರು 2000 ಹೆಚ್ಚು ಪ್ರೌಡಶಾಲಾ ವಿದ್ಯಾರ್ಥಿಗಳಿಗೆ ಒತ್ತಡ ನಿರ್ವಹಣೆ ಮತ್ತು ಜೀವನ ಕೌಶಲ್ಯ ದ ಬಗ್ಗೆ ಶಿಕ್ಷಣ ನೀಡುವುದು ಕಲೆ,ಸಾಂಸ್ಕೃತಿಕ ಉಳಿಸಲು ಸಾಂಸ್ಕೃತಿಕ ಉತ್ಸವ ಹಬ್ಬಗಳನ್ನು ಪ್ರಾಯೋಜಿಸುವುದು ಬಡ ಮಕ್ಕಳಿಗೆ ಸಮವಸ್ತç ಮತ್ತು ಪೆನ್ನು ಪುಸ್ತಗಳ ವಿತರಣೆ ಮಾಡಿಸುವುದು ಕಾಲೇಜು ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯದ ಬಗ್ಗೆ ಅರಿವನ್ನು ಮೂಡಿಸುವುದು ರಕ್ತದಾನ ಶೀಬಿರವನ್ನು ಏರ್ಪಡಿಸುವುದು ಮಹಾತ್ಮರ ಜಯಂತಿಗಳನ್ನು ಆಯೋಜಿಸಿ ಅವರ ನೆನಪಿಗಾಗಿ ಬಡ ಮಕ್ಕಳಿಗೆ ಸಮವಸ್ತç ಪುಸ್ತಕಗಳನ್ನ ವಿತರಣೆ ಮಾಡುವುದು ಪ್ರೋಫೆಷನಲ್ ಸೋಶಿಯಲ್ ವರ್ಕ್ ಜಿಲ್ಲಾಧ್ಯಕ್ಷರಾಗಿ ಕಾರ್ಯಗಳು ಎಂ.ಎಸ್.ಡಬ್ಲೂö್ಯ ಪಧವೀದರರನ್ನು ಒಗ್ಗೂಡಿಸುವುದು ಪದವಿದರರಿಗೆ ಉದ್ಯೋಗಮೇಳ ಆಯೋಜಿಸುವುದು ಎಲ್ಲರಿಗೂ ಕೂಡ ರಾಜ್ಯ ಮಟ್ಟದ ಮಾನಸಿಕ ಆರೋಗ್ಯದ ಬಗ್ಗೆ ಮತ್ತು ಒತ್ತಡ ನಿರ್ವಹಣೆ ಬಗ್ಗೆ ಕಾರ್ಯಗಾರ ಹಮ್ಮಿಕೊಂಡಿರುವುದು ರಾಜ್ಯಮಟ್ಟದ ವಿಪತ್ತು ನಿರ್ವಹಣೆ ಮತ್ತು ಮನೋಸಾಮಾಜಿಕ ಆರೈಕೆ ಕಾರ್ಯಗಾರವನ್ನು ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳುವುದು ಉದ್ಯೋಗದ ಬಗ್ಗೆ ಮಾಹಿತಿ ನೀಡುವುದು ಸಹ ಕಾರ್ಯನಿಮಿತ್ತ ತೊಡಗಿಕೊಂಡಿರುವ ಸಂತೋಷವರನ್ನು ಸಂದರ್ಶನ ಮಾಡಬೇಕೆಂದು ನನ್ನ ಹಂಬಲಕ್ಕೆ ಕೊನೆಗೆ ಒಂದು ದಿನ ಅವರನ್ನು ಭೇಟಿ ಮಾಡಲು ಅವಕಾಶ ಸಿಕ್ಕಾಗ ನನಗೆ ತುಂಬಾ ಸಂತೋಷವಾಯಿತು. ಅವರನ್ನು ಸಂದರ್ಶನದಲ್ಲಿ ತೊಡಗಿಸಿಕೊಂಡಾಗ ನಾವು ಕೇಳುವ ಪ್ರಶ್ನೆಗಳಿಗೆ ತುಂಬಾ ಹಸನ್ಮುಖಿಯಾಗಿ ಉತ್ತರವನ್ನು ನೀಡಿರುವುದು ತುಂಬಾ ಸಂತೋಷದ ವಿಷಯ
ನೀವು ಹುಟ್ಟಿ ಬೆಳೆದದ್ದು. ?

ಸರ್ ನಾನು ಹುಟ್ಟಿ ಬೆಳೆದೆದೆಲ್ಲಾ ಕುಕ್ಕವಾಡ ಎಂಬ ಗ್ರಾಮದಲ್ಲಿ ನನ್ನ ತಂದೆ ಎನ್.ಮಲ್ಲೆಶಪ್ಪ ತಾಯಿ ಜಯಲಕ್ಷಿ
ನಿಮ್ಮ ಶೈಕ್ಷಣಿಕ ಹಿನ್ನಲೆ ಹೇಳುವುದಾದರೆ..

ನಾನು ಒಂದನೆ ತರಗತಿಯಿಂದ ಎಂಟನೇ ತರಗತಿಯವರೆಗೆ ಕುಕ್ಕವಾಡದಲ್ಲಿಯೇ ವಿದ್ಯಾಭ್ಯಾಸವನ್ನು ಮಾಡಿದ್ದೆನು, ನಂತರ ದಾವಣಗೆರೆ ಜಿಲ್ಲೆಯಲ್ಲಿ ಒಂಬತ್ತನೇ ತರಗತಿಯಿಂದ ಬಿ.ಎ ಪದವಿವರೆಗೆ ದಾವಣಗೆರೆಯಲ್ಲೇ ಮುಗಿಸಿದೆನು, ತದನಂತರ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಎಂ.ಎಸ್.ಡಬ್ಲೂö್ಯ ಸಮಾಜಕಾರ್ಯ ವಿದ್ಯಾಭ್ಯಾಸ ಸ್ನಾತಕೋತ್ತರ ಪದವಿಯನ್ನು 2015ರಲ್ಲಿ ಮುಗಿಸಿದೆನು.

ನಿಮ್ಮ ಚಿಕ್ಕವಹಿಸಿನಲ್ಲಿ ಹೇಗಿತ್ತು ನಿಮ್ಮ ಜೀವನದ ಏಳು ಬೀಳು..

ನಿಜ ಸರ್ ನಾನು ತುಂಬಾ ಬಡ ಹಿನ್ನೆಲೆ ಕುಟುಂಬದಿAದ ಬಂದವನು. ನನ್ನ ತಂದೆ ಮತ್ತು ತಾಯಿ ಅಕ್ಕ, ನನ್ನನ್ನು ತಂಬಾ ಕಷ್ಟ ಪಟ್ಟು ಬೆಳೆಸಿದರು. ಆ ದಿನಗಳೆ ಇವತ್ತು ನನ್ನ ಈ ಬೆಳವಣಿಗೆಗೆ ಕಾರಣ ಅಂತ ಹೆಮ್ಮೆಯಿಂದ ಹೇಳಬಹುದು
ನೀವು ಕುಕ್ಕವಾಡ ಗ್ರಾಮವನ್ನು ಯಾಕೆ ಕುಟುಂಬ ಸಮೇತ ಬಿಟ್ಟು ಬರುತ್ತೀರಾ ?

ಬಡತನ… ಅಲ್ಲಿ ನಮ್ಮ ಹೊಲದಲ್ಲಿ ನಮ್ಮ ತಂದೆ ತಾಯಿ ಕೆಲಸವನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದರು .ಒಂದೇ ಸಮನೆ ಫಾಕ್ಟರೀ ನಿಂತೆ ಬಿಟ್ಟಿತ್ತು ಸೋ ಹಾಗಾಗಿ ಮತ್ತು ನಮ್ಮ ತಂದೆ ತಾಯಿ ಮಕ್ಕಳಿಗೆ ನಗರ ಪ್ರದೇಶದಲ್ಲಿ ಒಳ್ಳೆಯ ಶಿಕ್ಷಣ ನೀಡುವÀ ಸಲುವಾಗಿ ದಾವಣಗೆರೆಗೆ ಬಂದು ಹೋಟೆಲ್ ಉದ್ಯಮವನ್ನು ಪ್ರಾರಂಭಿಸಿದೆವು. ಅದರಲ್ಲಿ ಬಂದತAಹ ಹಣದಿಂದ ನನ್ನ ಶಿಕ್ಷಣ,ಅಕ್ಕ ತಂಗಿಯರ ಶಿಕ್ಷಣ ಹಾಗೂ ಮನೆ ನಿರ್ವಹಣೆ ಸಾಗುತ್ತಿತ್ತು.
ನಿಮ್ಮ ಜೀವನದಲ್ಲಿ ನಿಮ್ಮ ತಂದೆ ಮತ್ತು ತಾಯಿ ಕೊಡುಗೆಯನ್ನು ನೆನುವುದಾದರೆ ?

ಏನು ಅಂತ ಹೇಳೋಣಾ ಸರ್, ಅವರ ಬಗ್ಗೆ ಮಾತನಾಡಲು ಮತ್ತು ಹೇಳಲು ಪದಗಳೇ ಸಾಲದು ಯಾಕೆಂದರೆ ! ಅಷ್ಟು ಕಷ್ಟ ಪಟ್ಟು ಬೆಳೆಸಿದರು ಆ ದಿನಗಳನ್ನು ನೆನೆದರೆ ಇವಾಗಲು ಸಹ ಕಣ್ನಲ್ಲಿ ನೀರು ಬರುತ್ತದೆ. ಒಂದು ದಿನ ನನಗೆ ಕಾಲೇಜಿಗೆ ಕಟ್ಟಲು ಹಣವಿಲ್ಲದ ಸಂದರ್ಭ ಎದುರಾದಾಗ ನನ್ನ ತಾಯಿಯ ಕೊರಳಲಿದ್ದ ಸರವನ್ನು ಗರ‍್ವಿ ಇಟ್ಟು ಹಣವನ್ನು ತಂದದ್ದು ನೆನದರೆ ಹೃದಯ ಬಾರವೆನ್ನಿಸುತ್ತದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ನನ್ನ ಈ ಬೆಳವಣಿಗೆಯಲ್ಲಿ ಅವರ ಪಾತ್ರ ತುಂಬಾ ದೊಡ್ಡದಿದೆ ಸರ್ ಮೊದಲೇ ನಿಮ್ಮ ಮನಸಲ್ಲಿ ಇಂತಹ ಸಮಾಜ ಸೇವೆ ಮಾಡಬೇಕೆಂಬ ಹಂಬಲ ಹುಟ್ಟಿದ್ದು ಯಾವಾಗ ಹೇಕೆ ಸರ್?
ನನ್ನ ತಂದೆಯವರು ಆಗಲೇ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದರಿಂದ ಅವರ ಆದರ್ಶ ತತ್ವಗಳೇ ಇನಷ್ಟು ನನ್ನöನ್ನು ಪ್ರೇರೇಪಿಸಿದವು. ಆಗ ನಾನು ನಾಲ್ಕು ಜನರಿಗೆ ಸಹಾಯ ಮಾಡಬೇಕೆಂಬುದು ಹಂಬಲ ಬೆಳೆಯುತ್ತಾ ಬಂದಿದೆ.ಮತ್ತು ನಾನು ಎಸ್.ಎಸ್.ಎಲ್.ಸಿ ಇದ್ದಾಗ ನನ್ನ ಮನಸ್ಸಲ್ಲಿ ಅದು ಬೇರೂರಿತ್ತು ಆಗ ನನ್ನ ಕಣ್ಣಿಗೆ ಯಾರಾದರೂ ನಿರ್ಗತಿಕರು, ಅಂಗವಿಕಲರು,ಮಾನಸಿಕ ಅಸ್ವಸ್ಥರನ್ನು ನಾನು ಕಂಡರೇ ಅವರಿಗೆ ಸಮವಸ್ತçವನ್ನು ಕೊಡಿಸುವುದು.ಶಿಕ್ಷಣಕ್ಕೆ ಬೇಕಾದಂತಹ ಸಾಮಾಗ್ರಿಗಳನ್ನು ಕೊಡಿಸುವುದು ಅಂದಿನಿAದಲೂ ರೂಪಿಸಿಕೊಂಡು ಬರುತ್ತಾಯಿದ್ದೇನೆ.

ಸರ್ ನಿಮ್ಮಲ್ಲಿ ಸ್ನೇಹಕ್ಕೆ ತುಂಬಾ ಮಹತ್ತರವಾದಂತಹ ಸ್ಥಾನವನ್ನ ಇಟ್ಟಿದ್ದೀರಾ ಅಂತ ಕೇಳ್ಪಟ್ಟೆ ?
(ನಗುತ್ತಾ.)… ಹೌದು ಸರ್ ನನಗೆ ಸ್ನೇಹಿತರು ಅಂದರೆ ತುಂಬಾ ಇಷ್ಟ ಸ್ನೇಹಕ್ಕೆ ತುಂಬಾ ಅಪಾರವಾದ ಶಕ್ತಿ ಇದೆ. ಅಂತಹ ಸ್ನೇಹ ಬಳಗ ಕೂಡ ನನ್ನ ಈ ಬೆಳವಣಿಗೆಗೆ ಕಾರಣ ನಾನು ಯಾವತ್ತಾದರು ಎಷ್ಟೋತ್ತಲ್ಲಾದರು ಒಂದು ಕರೆ ಮಾಡಿದರೆ ಸಾಕು ಎಲ್ಲಿದ್ದರು ಓಡಿ ಬರುವಂತಹ ಸ್ನೇಹಿತರು ಇದ್ದಾರೆ. ನನ್ನ ಪ್ರತಿಯೊಂದು ಹಂತದಲ್ಲಿ ಹೆಗಲಿಗೆ ಹೆಗಲು ಕೊಟ್ಟು ನಿಂತವರು ಎಂದರೆ ಯಲ್ಲಪ್ಪ, ಲಿಂಗರಾಜ್ ಎ.ಪಿ. ರವಿನಾಯ್ಕ್, ನಿಜಲಿಂಗಪ್ಪ, ಮಹಮ್ಮದ್ ಸಾದಿಕ್, ಗಜೇಂದ್ರ, ಶಿವಣ್ಣ ಇವರೆನ್ನೆಲ್ಲಾ ಕೂಡಿಸಿಕೊಂಡು ಸ್ವಾತಂತ್ರö್ಯ ಹೋರಾಟಗಾರರ ಪುತ್ಥಳಿಗಳನ್ನ ಸ್ವಚ್ಚಗೊಳಿಸುತ್ತಿದ್ದೇವು.
ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿ ಹೆಸರಲ್ಲೇ ಒಂದು ಶಕ್ತಿ ಇದೆ. ಆ ಸಂಸ್ಥೆಯ ಬಗ್ಗೆ ಹೇಳುವುದಾದರೆ ?

ನನ್ನ ತಂದೆ ಕಟ್ಟಿದ ಈ ಸಂಸ್ಥೆಯ ಉದ್ದೇಶ ತರೆಮಾರೆಯಲ್ಲಿ ಸಾಧನೆಗೈದ ಉದಯೋನ್ಮುಖ ಪ್ರತಿಭೆಗಳನ್ನು ಅನಾವರಣ ಮಾಡುವುದು, ಅವರಿಗೊಂದು ಗೌರವ ಹಾಗೂ ರಾಜ್ಯ ಮತ್ತು ರಾಷ್ಟಿçÃಯ ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸುವುದು ಈ ಸಂಸ್ಥೆಯ ಉದ್ದೇಶವಾಗಿದೆ, ಈ ನಿಮ್ಮ ಸಾಧನೆಯ ಹಾದಿಯಲ್ಲಿ ನೆನಯುವುದಾದರೆ ಯಾರನ್ನೆಲ್ಲಾ ನೆನಯುತ್ತೀರ, ನಾನು ನಿಜ ಹೇಳಬೇಕೆಂದರೆ ಏನು ಸಾಧನೆ ಮಾಡಿಲ್ಲಾ ಇನ್ನು ತುಂಬಾ ಮಾಡುವಿದಿದೆ. ನಾನು ಇಷ್ಟಕ್ಕೂ ಸಾಧನೆ ಎನ್ನುವ ಭ್ರಮೆಯಲ್ಲಿ ಯಾವತ್ತು ಇಲ್ಲಾ, ಇರೊದು ಇಲ್ಲಾ, ಇನ್ನು ಹೆಚ್ಚಿನದಾಗಿ ಮಾಡುತ್ತಾ ಹೋಗಬೇಕು ಸಮಾಜದಲ್ಲಿ ಈ ಕೋವಿಡ್ ಬಂದ ನಂತರ ಎಷ್ಟೋ ನಿರ್ಗತಿಕರು ಬೀದಿಗೆ ಬಿದ್ದಿದ್ದಾರೆ, ಅವರನ್ನು ರಕ್ಷಿಸುವ ಕಡೆಗೆ ನನ್ನ ಗಮನ ಸಾಗುತ್ತಿದೆ. ನನ್ನ ಜೀವನದ ಹಾದಿಯಲ್ಲಿ ನೆನಯುವುದಾದರೆ ದೊಡ್ಡದೊಂದು ಪಟ್ಟಿಯೇ ಇದೆ. ನನ್ನ ತಂದೆ ತಾಯಿಯ ಆರ್ಶಿವಾದದೊಂದಿಗೆ ವಿದ್ಯಾಭ್ಯಾಸವನ್ನು ಆರಂಭಿಸಿದ ನಾನು ನನಗೆ ನನ್ನ ತಂದೆ ತಾಯಿಯೇ ಸ್ಫೂರ್ತಿ ಜೊತೆಗೆ ನನ್ನ ಚಿಕ್ಕಮ್ಮರಾದ ನೇತ್ರಾವತಿ,ತಾರಾಕೇಶ್ವರಿ,ನಯನ,ನವೀನ, ಪ್ರಿಯಾಂಕ, ವಿಶೇಷವಾಗಿ ನನ್ನ ಧರ್ಮಪತ್ನಿ ದಿವ್ಯಾ ಸಂತೋಷ್, ನನ್ನ ಪ್ರೀತಿಯ ಸ್ನೇಹಿತರು. ಹಾಗೂ ನಾನು ಉನ್ನತ ವ್ಯಾಸಂಗ ಎಂ.ಎಸ್.ಡಬ್ಲೂö್ಯ ಸಮಾಜ ಕಾರ್ಯ ಅಧ್ಯಯನ ಮಾಡುವಾಗ ನನಗೆ ಬೆನ್ನು ತಟ್ಟಿದ್ದು ನನ್ನ ದೊಡ್ಡಮ್ಮ ಬಿ.ಹೆಚ್.ಉಮಾಮಹೇಶ್ವರಿ ಮತ್ತು ಪ್ರೋ.ಪ್ರದೀಪ್, ನನ್ನ ಕುಟುಂಬ ವರ್ಗದವರು , ನಂತರ ನಾನು 2016 ರಲ್ಲಿ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವುದಕ್ಕೆ ಪ್ರಾರಂಭಿಸಿದ ನಂತರ ನನಗೆ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿಗಳಾz ಡಾ.ಸರೋಜ ಬಾಯಿ, ಡಾ.ದಯಾನಂದ, ವಿಜಯ್ ಕುಮಾರ್, 2019 ರಲ್ಲಿ ಡಾ.ಮುರುಳಿಧರ್ ಪಿ.ಡಿ.ಮತ್ತು ಮನೋವೈದ್ಯರಾದ ಡಾ.ಗಂಗ ಸಿದ್ದರೆಡ್ಡಿ, ಅಂಜಿನಮ್ಮ, ಗಿರೀಶ್ ನಾಯ್ಕ್,ನಾಗರಾಜ್ ಮಂಜುನಾಥ್. ಇತರರು ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿಯಲ್ಲಿ ನನಗೆ ಬೆಂಬಲ ಸೂಚಿಸುವವರು ನನ್ನ್ ಎಲ್ಲಾ ಪದಾಧಿಕಾರಿಗಳು ಮತ್ತು ಡಾ.ಶಿವಾನಂದ ದಳವಾಯಿ , ಪ್ರಕಾಶ್ ಎ.ಕೆ. ಡಾ.ಗುಣವಂತ ಮಂಜು, ಇನ್ನು ಅನೇಕರು ನನಗೆ ಸಂಪೂರ್ಣವಾದ ಸಹಕಾಋ ನೀಡಿದ್ದಾರೆ,
ಸಂತೋಷ್ ಕುಮಾರ್ ರವರ ಸೇವಾ ನಿಷ್ಠೆಯನ್ನು ಮೆಚ್ಚಿ ಹರಸಿ ಬಂದ ರಾಷ್ಟ ಮತ್ತು ರಾಜ್ಯ ಪ್ರಶಸ್ತಿಗಳು 2014ರಲ್ಲಿ ಬಸವಜ್ಯೋತಿ ರಾಜ್ಯ ಪ್ರಶಸ್ತಿ ವಿಜಾಪುರದ ಶ್ರೀ ಬಸವೇಶ್ವರ ಕಲಾ ಸಾಹಿತ್ಯ ವೇದಿಕೆ ವತಿಯಿಂದ ದಾವಣಗೆರೆ ಜಿಲ್ಲಾಡಳಿತದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ
ದಾವಣಗೆರೆ ಮಹಾನಗರಪಾಲಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ
ಎ.ಪಿ.ಜೆ.ಅಬ್ದುಲ್ ಕಲಾಂ ರಾಷ್ಟಿಯ ಪ್ರಶಸ್ತಿ
ಕರ್ನಾಟಕ ರತ್ನ ಶ್ರೀ ಪ್ರಶಸ್ತಿ
ರಾಷ್ಟಿಯ ರತ್ನ ಪ್ರಶಸ್ತಿ
ಸಮಾಜ ಸೇವಾ ರತ್ನ ಪ್ರಶಸ್ತಿ
ಪ್ರೇಮೋತ್ಸವ ಪ್ರಶಸ್ತಿ
ಡಾ.ಬಿ.ಆರ್.ಅಂಬೇಡ್ಕರ್ ಜೀವಮಾನ ಸಾಧನೆ ಪ್ರಶಸ್ತಿ
ಭಾರತ ವಿಕಾಸ ರತ್ನ ಪ್ರಶಸ್ತಿ
ಮಹಾತ್ಮ ಗಾಂಧೀಜಿ ಪೀಸ್ ಆವಾರ್ಡ್
ಸ್ನೇಹ ರತ್ನ ಪ್ರಶಸ್ತಿ
ಆಕ್ಟೀವ್ ಸೋಶಿಯಲ್ ವರ್ಕ್ರ್ ರಾಜ್ಯ ಪ್ರಶಸ್ತಿ
ಭಾರತ ಸೇವಾ ರತ್ನ ರಾಷ್ಟç ಪ್ರಶಸ್ತಿ
ಕರ್ನಾಟಕ ಭೂಷಣ ರಾಷ್ಟç ಪ್ರಶಸ್ತಿ
ಕೋರೋನಾ ವಾರಿಯರ್ ಪ್ರಶಸ್ತಿ
ಭಾರತ ಭೂಷಣ ರಾಷ್ಟç ಪ್ರಶಸ್ತಿ
ದೇಶ್‌ಪಾಂಡೆ ಫೌಂಡೇಶನ್ ವತಿಯಿಂದ ಅಂಬಾಸಿಡರ್ ಆವಾರ್ಡ್
2020ರಲ್ಲಿ ದಿ ಹ್ಯೂಮನ್ ಪೀಸ್ ಯುನಿರ್ವಸಿಟಿ ವತಿಯಿಂದ ಸಾಮಾಜಿಕ ಸೇವೆ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿರುತ್ತಾರೆ
ಇನ್ನು ಮುಂತಾದ ಅನೇಕ ಪ್ರಶಸ್ತಿಗಳು ಹರಸಿ ಬಂದಿವೆ

Get real time updates directly on you device, subscribe now.

Leave A Reply

Your email address will not be published.

Don`t copy text!