ಮೋದಿಯನ್ನು ಭೇಟಿಯಾದ ಮೈಸೂರಿನ ಶಿಲ್ಪಿ ಯೋಗಿರಾಜ್ ಅರುಣ್

0

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೈಸೂರಿನ ಶಿಲ್ಪಿಯಾದ ಅರುಣ್ ಯೋಗರಾಜ್ ಅವರು ಭೇಟಿ ಮಾಡಿ ಸುಭಾಶ್ಚಂದ್ರ ಬೋಸ್ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದರು. ಶಿಲ್ಪ ಕಲೆಯಲ್ಲಿ ಅರುಣ್ ಯೋಗಿರಾಜ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದ್ದಾರೆ. ಇತ್ತೀಚೆಗೆ ಕೇದಾರನಾಥ್​ನಲ್ಲಿ ಅವರು ಕೆತ್ತನೆ ಮಾಡಿದ ಆದಿ ಶಂಕರಾಚಾರ್ಯ ಪ್ರತಿಮೆಯನ್ನು ಉದ್ಘಾಟಿಸಲಾಗಿದೆ.

ಮಂಗಳವಾರ ಪ್ರಧಾನಿ ಮೋದಿ ಅವರನ್ನು ಮಾಡಿರುವ ಅರುಣ್ ಯೋಗಿರಾಜ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಬೋಸ್​ ಪ್ರತಿಮೆ ಉಡುಗೊರೆಯಾಗಿ ನೀಡಿದ್ದಾರೆ. ಈ ಬಗ್ಗೆ ಸ್ವತಃ ಪ್ರಧಾನಿ ಅವರೇ ಟ್ವೀಟ್​ ಮಾಡಿದ್ದಾರೆ. ‘ಇವತ್ತು ಅರುಣ್ ಯೋಗಿರಾಜ್ ಅವರನ್ನು ಭೇಟಿ ಮಾಡಿದ್ದಕ್ಕೆ ಸಂತೋಷವಾಗಿದೆ. ನೇತಾಜಿ ಬೋಸ್ ಅವರ ಶಿಲ್ಪವನ್ನು ನೀಡಿರುವುದಕ್ಕೆ ಅವರಿಗೆ ಕೃತಜ್ಞರಾಗಿರುತ್ತೇವೆ’ ಎಂದು ಮೋದಿ ಟ್ವೀಟ್​​ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

 ಪ್ರಧಾನಿ ಮೋದಿ ಮತ್ತು ಶಿಲ್ಪಿ ಅರುಣ್ ಯೋಗರಾಜ್ ಭೇಟಿ ಬಗ್ಗೆ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದು, ದೆಹಲಿಯ ಇಂಡಿಯಾ ಗೇಟ್ ಬಳಿ ಸುಭಾಶ್ಚಂದ್ರ ಬೋಸ್​ ಪ್ರತಿಮೆಯನ್ನು ನಿರ್ಮಿಸಲು ಅರುಣ್ ಯೋಗಿರಾಜ್ ಅವರಿಗೆ ನೀಡಲಾಗುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Get real time updates directly on you device, subscribe now.

Leave A Reply

Your email address will not be published.

Don`t copy text!