ಕರ್ನಾಟಕದಲ್ಲೂ ಬುಲ್ಡೋಜರ್ ಕಾನೂನು ಬರಲಿ: ಸಚಿವ ಆರ್.ಅಶೋಕ್

0

ದೇವನಹಳ್ಳಿ: ಗಲಭೆ ಮಾಡುವವರನ್ನು ಬಂಧಿಸಿದರೂ ನ್ಯಾಯಾಲಯದಲ್ಲಿ ಜಾಮೀನು ತೆಗೆದುಕೊಂಡು ಹೊರಬಂದು ಮತ್ತದೇ ಕೆಲಸ ಮಾಡುತ್ತಾರೆ. ಹೀಗಾಗಿ ಇಂತಹವರಿಗೆ ಕಡಿವಾಣ ಹಾಕಬೇಕಾದರೆ ಮನೆ-ಮಠ ಇಲ್ಲದಂತೆ ಮಾಡಬೇಕು. ರಾಜ್ಯದಲ್ಲೂ ಜೆಸಿಬಿ, ಬುಲ್ಡೋಜರ್ ಮಾದರಿ ಬಂದರೆ ಒಳ್ಳೆಯದು ಎಂದು ಕಂದಾಯ ಸಚಿವ ಆರ್.ಆಶೋಕ್ ಹೇಳಿದರು.

ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶಕ್ಕೆ ಆಗಮಿಸಿದ್ದ ಅವರು ಮಾಧ್ಯಮದೊಂದಿಗೆ ಮಾತನಾಡಿ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಗಲಭೆಕೋರರ ಮನೆ ಕೆಡಹುವ ಬುಲ್ಡೋಜರ್ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡರು. ಹುಬ್ಬಳ್ಳಿ ಘಟನೆಯಲ್ಲೂ ಬಂಧಿತ ಎಲ್ಲ ಆರೋಪಿಗಳು ರೌಡಿಶೀಟರ್​ಗಳು. ಜೈಲಿನಿಂದ ಆಚೆ ಬಂದು ಮತ್ತೆ ಒಂದು ವಾರಕ್ಕೆ ಗಲಭೆ ಸೃಷ್ಟಿ ಮಾಡಿದ್ದಾರೆ ಎಂದು ತಿಳಿಸಿದರು.

ಇಂತಹವರು ಯಾವತ್ತೂ ಬುದ್ದಿ ಕಲಿಯಲ್ಲ. ಇವರಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂದರೆ ಮನೆ-ಮಠ‌ ಇಲ್ಲದ ಹಾಗೆ ಮಾಡಬೇಕು. ಆಗ ದಾರಿಗೆ ಬರುತ್ತಾರೆ. ಈ ಗಲಭೆಕೋರ ಮನಸ್ಥಿತಿ ಇರುವರಿಗೆ ಉತ್ತರ ಪ್ರದೇಶ ಮಾದರಿಯ ಕಾನೂನು ಬರಬೇಕು. ಮುಸ್ಲಿಮರಲ್ಲೂ ಬಹಳ‌ ಒಳ್ಳೆಯವರು ಇದ್ದಾರೆ. ನಮ್ಮ ರಾಜ್ಯದಲ್ಲಿ ಕೆಲ ಪುಂಡ ಪೋಕರಿಗಳ ಮಟ್ಟ ಹಾಕಲು ಇಂತಹ ಕಾರ್ಯಾಚರಣೆ ಅವಶ್ಯಕವಾಗಿದೆ. ಈ ಬಗ್ಗೆ ಸಿಎಂ ಅಂತಿಮ‌ ತೀರ್ಮಾನ ಮಾಡಲಿ ಎಂದು ಅಭಿಪ್ರಾಯಪಟ್ಟರು.

Get real time updates directly on you device, subscribe now.

Leave A Reply

Your email address will not be published.

Don`t copy text!