ಜಯೇಶ್‍ಭಾಯ್ ಜೋರ್‍ದಾರ್‍ನಲ್ಲಿ ಹೊಸ ಗೀತೆ ಫೈರ್‍ಕ್ರ್ಯಾಕರ್‍ಗೆ ರಣ್‍ವೀರ್ ಐಟಂ ಬಾಯ್ ಆಗಿ ಪರಿವರ್ತನೆ!

0

ರಣ್‍ವೀರ್ ಈ ಕುರಿತು, “ಫೈರ್‍ಕ್ರ್ಯಾಕರ್ ಒಂದು ಕಂಪನ. ಮನೀಶ್‍ಗೆ ಅತ್ಯಂತ ಸ್ಪಷ್ಟತೆಯಿತ್ತು. ದಿವ್ಯಾಂಗ್, ನೀವು ಇಡೀ ಪಾತ್ರದಲ್ಲಿ ನಟಿಸಿದ್ದೀರಿ; ಇಡೀ ಪಾತ್ರದ ಏರಿಳಿತ ಪ್ರಯಾಣ ಕಂಡಿದ್ದೀರಿ. ಈಗ ಪಾತ್ರ ನಿಮ್ಮದು, ನೀವೇ ಅದಕ್ಕೆ ನೃತ್ಯ ಮಾಡಬೇಕು. ಅದಕ್ಕೆ ನೃತ್ಯ ನಿರ್ದೇಶನವಿಲ್ಲ! ಜಯೇಶ್ ಪಾತ್ರದಲ್ಲಿ ಹೇಗಿರುತ್ತಾನೋ ಹಾಗೆಯೇ ನೀವು ಮುಕ್ತವಾಗಿರಿ” ಎಂದಿದ್ದರು.

“ಹುಕ್ ಸ್ಟೆಪ್ ಹೊರತಾಗಿಸಿ ನಾನು ಜಯೇಶ್ ಹೇಗೆ ನೃತ್ಯ ಮಾಡಬಹುದೋ ಹಾಗೆ ನೃತ್ಯ ಮಾಡಿದೆ. ಪಾತ್ರದಲ್ಲಿರುವುದರಿಂದ ಈ ಚಲನೆಗಳು ತಾನಾಗಿಯೇ ಹೊರಹೊಮ್ಮಿದವು. ನಾವು ಅದನ್ನು ಸೆರೆಹಿಡಿದೆವು. ಅದು ತನ್ನದೇ ಆದ ಆಕರ್ಷಣೆ ಹೊಂದಿದೆ. ಜಯೇಶ್ ಅತ್ಯಂತ ಪ್ರೀತಿಸಲ್ಪಡುವ ಪಾತ್ರ ಮತ್ತು ಅದನ್ನೇ ನಾವು ಈ ಗೀತೆಯಲ್ಲಿ ಪ್ರಸ್ತುತಪಡಿಸಿ ಪ್ರದರ್ಶಿಸಲು ಬಯಸಿದೆವು. ಆತ ಜೀವನದಲ್ಲಿ ಬರೀ ಆನಂದ ಹೊಂದುವುದಲ್ಲ, ಇದು ಜೀವನದ ಕುರಿತಾದ ಅದ್ಭುತ ಪ್ರೀತಿ, ಈ ಆನಂದವು ಆತನಲ್ಲಿರುವ ದೊಡ್ಡ ಹೃದಯದಲ್ಲಿ ಹೊರಹೊಮ್ಮುತ್ತಿದೆ” ಎಂದರು.

ರಣ್‍ವೀರ್ ಈ ಗೀತೆಯು ಎಲ್ಲರನ್ನೂ ನಗುವಂತೆ ಮಾಡುತ್ತದೆ ಎಂಬ ವಿಶ್ವಾಸ ನಮ್ಮದು ಎಂಬ ಅಪಾರ ವಿಶ್ವಾಸ ವ್ಯಕ್ತಪಡಿಸುತ್ತಾರೆ! ಅವರು, “ಪ್ರತಿಸಲವೂ ನಾನು ಫೈರ್‍ಕ್ರ್ಯಾಕರ್ ವೀಕ್ಷಿಸುವಾಗ ಹಾಡಿನ ಕೊನೆಯವರೆಗೂ ಅವರ ಮುಖದಲ್ಲಿ ನಗುವನ್ನು ತಡೆಯಲೇ ಸಾಧ್ಯವಿಲ್ಲ; ಅಂದರೆ ಹಾಡಿನಲ್ಲಿ ಹಾಗೂ ಆ ಪಾತ್ರ ಮತ್ತು ನೃತ್ಯದಲ್ಲಿ ಒಂದು ಬಗೆಯ ಸಂತೋಷವಿದೆ” ಎಂದರು.

Get real time updates directly on you device, subscribe now.

Leave A Reply

Your email address will not be published.

Don`t copy text!