ವಿಜೃಂಭಣೆಯಿಂದ ನೆರವೇರಿದ ಮಹೇಶ್ವರಮ್ಮ ದೇವಿ ಕರಗ

0

ಯಲಹಂಕ : ಯಲಹಂಕ ವಹ್ನಿಕುಲ ಕ್ಷತ್ರಿಯ ಮಂಡಳಿ ಟ್ರಸ್ಟ್ ವತಿಯಿಂದ ಯಲಹಂಕ ಹಳೇನಗರದ ಡೌನ್ ಬಜಾರ್ ರಸ್ತೆಯಲ್ಲಿರುವ ಐತಿಹಾಸಿಕ ಮಹೇಶ್ವರಮ್ಮ ದೇವಿ ಕರಗ ಮಹೋತ್ಸವ ಬುಧವಾರ ಮಧ್ಯರಾತ್ರಿ ವಿಜೃಂಭಣೆಯಿಂದ ನೆರವೇರಿತು.

ಬುಧವಾರ ಮಧ್ಯರಾತ್ರಿ 12ಕ್ಕೆ ನೆರವೇರಿದ ಮಹೇಶ್ವರಮ್ಮ ದೇವಿ ಹೂವಿನ ಕರಗ ಮಹೋತ್ಸವ ಮತ್ತು ಹೂವಿನ ಪಲ್ಲಕ್ಕಿ ಉತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ದೇವಿಗೆ ಉಘೇ ಎಂದರು.  ಯಲಹಂಕ ನಗರದ ಪ್ರಮುಖ ಬೀದಿಗಳಲ್ಲಿ ಮಹೇಶ್ವರಮ್ಮ ದೇವಿಯ ಕರಗದ ಮೆರವಣಿಗೆ ಮತ್ತು ಹೂವಿನ ಪಲ್ಲಕ್ಕಿ ಉತ್ಸವದ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.

ಮೇ 3 ರಿಂದ ಆರಂಭವಾಗಿರುವ‌ ಯಲಹಂಕದ ಮಹೇಶ್ವರಮ್ಮ ದೇವಿ ಕರಗ ಮಹೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ತನ್ನ ವೈಭವದಿಂದಾಗಿ ಬೆಂಗಳೂರು ಕರಗದಷ್ಟೇ ಪ್ರಖ್ಯಾತಿ ಪಡೆದಿದ್ದು ಮೇ 20ರ ಗುರುವಾರ ವಸಂತೋತ್ಸವದೊಂದಿಗೆ  ಐತಿಹಾಸಿಕ ಕರಗ ಮಹೋತ್ಸವಕ್ಕೆ ವಿದ್ಯುಕ್ತವಾಗಿ ತೆರೆ ಕಾಣಲಿದೆ ಎಂದು ವಹ್ನಿಕುಲ ಕ್ಷತ್ರಿಯ ಮಂಡಳಿ ಟ್ರಸ್ಟ್ ನ ಪದಾಧಿಕಾರಿ ಮು.ಕೃಷ್ಣಮೂರ್ತಿ ಮಾಹಿತಿ ನೀಡಿದರು.

Get real time updates directly on you device, subscribe now.

Leave A Reply

Your email address will not be published.

Don`t copy text!