ಹೆಬ್ಬಗೋಡಿ ನಗರಸಭೆಯ ನೂತನ ಸಿಇಓ ಶ್ವೇತಾ ಬಾಯಿ ಅಧಿಕಾರ ಸ್ವೀಕಾರ
ಹೆಬ್ಬಗೋಡಿ: ನಗರಸಭೆಯ ನೂತನ ಸಿಇಓ ಶ್ವೇತಾ ಬಾಯಿ ,ಅಧಿಕಾರ ಸ್ವೀಕಾರ.
ಬೆಂಗಳೂರು ನಗರ ಜಿಲ್ಲೆ ಹೆಬ್ಬಗೋಡಿ ನಗರಸಭೆಯ ನೂತನ ಸಿಇಓ ಶ್ವೇತಾ ಬಾಯಿ ರವರು ಇಂದು ಅಧಿಕಾರ ಸ್ವೀಕಾರ ಮಾಡಿದರು, ನೂತನವಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಶ್ವೇತಾ ಭಾಯಿ ರವರು ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾರ್ಡ್ ಗಳ ಅಭಿವೃದ್ಧಿಗೆ ಪಣ ತೊಡುತ್ತೇನೆ . ಮುಖ್ಯವಾಗಿ ಕಸ ತ್ಯಾಜ್ಯ ವಿಲೇವಾರಿಗೆ ಹೆಚ್ಚು ಒತ್ತುಕೊಟ್ಟು ಹೆಬ್ಬಗೋಡಿ ನಗರವನ್ನು ಮಾದರಿ ಮಾಡುತ್ತೇನೆ ಕುಡಿಯುವ ನೀರು ಒಳ ಚರಂಡಿ ರಸ್ತೆಗಳು ,ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸಮಾಜಕ್ಕೆ ಉತ್ತಮ ಸೇವೆ ಮಾಡುತ್ತೇನೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ನಗರಸಭೆಯ ಸಿಬ್ಬಂದಿಗಳು ಅಧಿಕಾರಿಗಳು ಹಾಗೂ ಸಾರ್ವಜನಿಕರು ರಾಜಕೀಯ ಮುಖಂಡರು ಭಾಗವಹಿಸಿದ್ದರು.