ಅಧಿಕಾರಿಗಳಿಗೆ ಸ್ಥಳೀಯರಿಂದ ಪರವಾನಿಗೆ ನೀಡದಿರಲು ಆಕ್ರೋಶ
ಶಿಡ್ಲಘಟ್ಟ: ನಗರ ಪ್ರದೇಶಕ್ಕೆ ಹೊಂದಿಕೊಂಡಿರುವ ದಿಬ್ಬೂರಹಳ್ಳಿ ರಸ್ತೆಯ ಪಕ್ಕದಲ್ಲೇ ಇರುವ ಗ್ಯಾಸ್ ಗೋಡನ್ ಪಕ್ಕ ಎಂಎಸ್ ಐಎಲ್ ಮದ್ಯದ ಅಂಗಡಿ ಪರವಾನಿಗೆ ನೀಡಲು ಸ್ಥಳ ಮಹಜರು ಮಾಡಲು ಬಂದಿದ್ದ ಅಧಿಕಾರಿಗಳಿಗೆ ಸ್ಥಳೀಯರು ಪರವಾನಿಗೆ ನೀಡದಿರಲು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳ ಮಹಜರು ಮಾಡಲು ಬಂದಿದ್ದ ಅಬಕಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳೀಯ ನಿವಾಸಿಗಳು,ಸುತ್ತಮುತ್ತ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಹಾಗೂ ನಗರಸಭೆ ಸದಸ್ಯರು ಸೇರಿ ಮುಂತಾದವರು ಸ್ಥಳದಲ್ಲಿ ಜಮಾಯಿಸಿ,ಈ ಪ್ರದೇಶದಲ್ಲಿ ಗ್ಯಾಸ್ ಗೋಡನ್ ಇದೆ ಹಾಗೂ ಶಾಲಾ ಕಾಲೇಜುಗಳು ಪಕ್ಕದಲ್ಲಿ ಇದ್ದಾವೆ ಹಾಗೂ ಆ ಜಾಗವು ನಗರಕ್ಕೆ ಸೇರಿರುವುದಿಲ್ಲ ಆ ಪ್ರದೇಶವು ಗ್ರಾಮಾಂತರಕ್ಕೆ ಸೇರುತ್ತದೆ,ಅದೇ ರೀತಿ ಮನೆಗಳು ಇದ್ದಾವೆ.
ಅದರಿಂದ ಈ ಪ್ರದೇಶದಲ್ಲಿ ಎಂಎಸ್ ಐಎಲ್ ಮದ್ಯದ ಅಂಗಡಿಗೆ ಅನುಮೋದನೆ ನೀಡಬೇಡಿ ಎಂದು ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಈ ಕುರಿತು ಶಿಡ್ಲಘಟ್ಟದ ಅಬಕಾರಿ ಇಲಾಖೆಗೆ ನಾವು ಪತ್ರದ ಮೂಲಕ ತೊಂದರೆಗಳನ್ನು ನೀಡಿದ್ದೇವೆ ಆದರೂ ಈ ದಿನ ಸ್ಥಳ ಮಹಜರಿಗೆ ಬಂದಿದ್ದಾರೆಂದು ಜನರು ಆಕ್ರೋಶ ವ್ಯಕ್ತಪಡಿಸಿದರು.