ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಗಳಿಸಿ ಸಾಧನೆ ಮೆರೆದ ಎಸ್.ಸಮೀಕ್ಷಾ

0

ಸೊರಬ: ಎಸ್ ಎಸ್ ಎಲ್ ಸಿ ಟಾಪರ್ ಎಸ್.ಸಮೀಕ್ಷಾ ಗೆ ಮುಂದೆ ಐಎಎಸ್ ಓದುವ ಕನಸು. ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಗಳಿಸಿ ಸಾಧನೆ ಮೆರೆದಿರುವ ಸೊರಬ ಪಟ್ಟಣದ ಈ ಬಾಲಕಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಸಾಧನೆಯ ಕುರಿತು ಮಾದ್ಯಮ ಪ್ರತಿನಿದಿಯೊಂದಿಗೆ ಮಾತನಾಡಿದ ಎಸ್. ಸಮೀಕ್ಷಾ, ನಾನು ಟಾಪರ್ ಆಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಉತ್ತಮ ಪ್ರತಿಫಲ ಸಿಕ್ಕಿದೆ. ಉತ್ತಮವಾಗಿ ವಿದ್ಯಾಭ್ಯಾಸ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಶಾಲೆಯಲ್ಲಿ ಶಿಕ್ಷಕರು ಉತ್ತಮವಾಗಿ ಪಾಠಗಳನ್ನು ಮಾಡಿದರು. ಮನೆಯಲ್ಲಿಯೂ ಪೋಷಕರು ವಿದ್ಯಾಭ್ಯಾಸಕ್ಕೆ ಉತ್ತಮ ವಾತಾವರಣ ಕಲ್ಪಿಸಿದ್ದರು. ಪರೀಕ್ಷಾ ಸಮಯಲ್ಲಿ ಹಳೇ ಪ್ರಶ್ನೆ ಪತ್ರಿಕೆಗಳು, ಮಾದರಿ ಪ್ರಶ್ನೆ ಪತ್ರಿಕೆಗಳು, ಪಠ್ಯಪುಸ್ತಕಗಳನ್ನು ಹೆಚ್ಚಾಗಿ ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡಿರುವುದು ಯಶಸ್ಸಿಗೆ ಕಾರಣವಾಗಿದೆ. ಮುಂದೆ ಪಿಯುಸಿ ವಿಜ್ಞಾನ ವಿಷಯವನ್ನು ಅಭ್ಯಾಸ ಮಾಡಿ ಭವಿಷ್ಯದಲ್ಲಿ ಐಎಎಸ್ ಮಾಡುವ ಕನಸಿದೆ. ಯಾವುದೇ ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆದ ಬಗ್ಗೆ ದೃತಿಗೆಡಬೇಕಿಲ್ಲ. ಮುಂದೆ ಅವಕಾಶಗಳಿದ್ದು, ಅದರಲ್ಲಿ ಉತ್ತಮ ಸಾಧನೆ ಮಾಡುವಂತೆ ಕರೆ ನೀಡಿದ್ದಾಳೆ. ಸಾಧನೆಗೈದಿರುವ ಎಸ್.ಸಮೀಕ್ಷಾ ಹಾಸ್ಟೆಲ್ ವಾರ್ಡನ್ ಶಿವಪ್ಪ-ಸುಮ ದಂಪತಿಗಳ ಪುತ್ರಿಯಾಗಿದ್ದಾಳೆ.

Get real time updates directly on you device, subscribe now.

Leave A Reply

Your email address will not be published.

Don`t copy text!