ಗೀತಂ ಯೂನಿವರ್ಸಿಟಿಯಲ್ಲಿ ಸೈಕಾಲಜಿ ವಿಭಾಗ ಆರಂಭ

0

ದೊಡ್ಡಬಳ್ಳಾಪುರ: ಲೋಕೋಪಕಾರ, ತತ್ವಶಾಸ್ತ್ರ ಮತ್ತು ನೈತಿಕತೆಯು ಗೀತಂ ಸ್ಕೂಲ್ ಆಫ್ ಹ್ಯುಮ್ಯಾನಿಟೀಸ್ ಆಂಡ್ ಸೋಷಿಯಲ್ ಸೈನ್ಸಸ್( ಜಿಎಸ್‌ಎಚ್‌ಎಸ್) ಮೂಲ ಬೇರು. ಎಲ್ಲರನ್ನೂ ಒಳಗೊಂಡು ಮುನ್ನಡೆಯುವ ವಾತಾವರಣ ವಿಶ್ವವಿದ್ಯಾಲಯದಲ್ಲಿದೆ ಎಂದು ಗೀತಂ ಅಧ್ಯಕ್ಷ ಎಂ.ಭರತ್ ಹೇಳಿದರು.

ತಾಲೂಕಿನ ಗೀತಂ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಸ್ಕೂಲ್ ಆಫ್ ಹ್ಯುಮ್ಯಾನಿಟೀಸ್ ಆಂಡ್ ಸೋಷಿಯಲ್ ಸೈನ್ಸಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗೀತಂ ವಿವಿಯು ಪಾಲುದಾರರು- ವಿದ್ಯಾರ್ಥಿಗಳು, ಬೋಧಕರು ಮತ್ತು ಇತರೆ ಸೇವಾ ಪ್ರಾಧ್ಯಾಪಕರ ನಡುವೆ ಒಗ್ಗಟ್ಟಿನ ಮನೋಭಾವ ಬೆಳೆಸಿದೆ ಎಂದರು.

ಗೀತಂ ಉಪಕುಲಪತಿ ಎಂ.ಎಸ್. ಮೋಹನ್ ಕುಮಾರ್ ಮಾತನಾಡಿ ವ್ಯಕ್ತಿಯು ಬಹುಶಿಸ್ತಿಯ ವ್ಯವಸ್ಥೆ ಮತ್ತು ಕೃತಕ ಬುದ್ಧಿಮತ್ತೆಯ ಜೊತೆ ಬೆರೆತಾಗ ಒಂದು ಉತ್ತಮ ಕಲಿಕೆಯ ವಾತಾವರಣ ನಿರ್ಮಾಣವಾಗುತ್ತದೆ. ಜ್ಞಾನ ವ್ಯವಸ್ಥೆಗಳ ಸಂಯೋಜನೆಯು, ಭವಿಷ್ಯದ ಸವಾಲುಗಳು ಹಾಗೂ ಸಮಸ್ಯೆಗಳನ್ನು ಎದುರಿಸಲು ಸದೃಢವಾಗಿರುವ ಅಡಿಪಾಯವನ್ನು ಹಾಕಿಕೊಡುತ್ತದೆ. ಇದರೊಂದಿಗೆ ಸಮರ್ಪಕವಾಗಿರುವ ಮಾರ್ಗದರ್ಶನ ವ್ಯವಸ್ಥೆ ಮತ್ತು ವೆಂಚರ್ ಡೆವಲಪ್ಮೆಂಟ್ ಕೇಂದ್ರವು ವಿದ್ಯಾರ್ಥಿಗಳು ಪದವಿಯಿಂದ ಆಚೆಗಿನ ವಿಷಯಗಳನ್ನು ಕಲಿಯಲು ನೆರವಾಗುತ್ತದೆ ಎಂದರು.

ಗೀತಂ ಸಂಸ್ಥೆಯ ಬೆಂಗಳೂರು ಕ್ಯಾಂಪಸ್‌ನಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ತಂತ್ರಜ್ಞಾನ, ವ್ಯವಹಾರ ಮತ್ತು ವಿಜ್ಞಾನ ಸ್ಕೂಲ್‌ಗಳಿಗೆ ಜಿಎಸ್‌ಎಚ್‌ಎಸ್ ಹೊಸ ಸೇರ್ಪಡೆಯಾಗಿದೆ.

ಬೆಂಗಳೂರು ಮಹಾನಗರದ ಐಟಿ ಹಬ್‌ಗೆ ಸಮೀಪದಲ್ಲೇ 2012 ರಲ್ಲಿ ಗೀತಂ ಸಂಸ್ಥೆಯ ಬೆಂಗಳೂರು ಕ್ಯಾಂಪಸ್ ಪ್ರಾರಂಭಿಸಿದೆ. ವಿಶಾಖಪಟ್ಟಣಂ ಮತ್ತು ಹೈದರಾಬಾದ್ ನಂತರ ಬೆಂಗಳೂರು ಮೂರನೇ ಕ್ಯಾಂಪಸ್ ಆಗಿದೆ. ಅರ್ಥಶಾಸ್ತ್ರ, ಇಂಗ್ಲಿಷ್, ರಾಜ್ಯಶಾಸ್ತ್ರ ಮತ್ತು ಮನಃಶಾಸ್ತ್ರ  ವಿಷಯಗಳಲ್ಲಿ ಬ್ಯಾಚುಲರ್ ಆಫ್ ಆಟ್ಸ್ (ಬಿ.ಎ) ಮತ್ತು ಪಿಎಚ್‌ಡಿ ಪ್ರೋಗ್ರಾಮ್‌ಗಳನ್ನು ಜಿಎಸ್‌ಎಚ್‌ಎಸ್ ವಿದ್ಯಾರ್ಥಿಗಳಿಗೆ ನೀಡಲಿದೆ. ಇದರೊಂದಿಗೆ ಸೋಷಿಯಾಲಜಿ, ಹಿಸ್ಟರಿ, ಡ್ಯಾನ್ಸ್ ಆಂಡ್ ಮ್ಯೂಸಿಕ್ ಕೋರ್ಸ್ ಗಳನ್ನು ಸಹ ಇಲ್ಲಿ ನೀಡಲಾಗುತ್ತದೆ.

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಯ್ಯದ್ ಕಿರ್ಮಾನಿ, ಬೆಂಗಳೂರಿನ ಇನ್ ಸ್ಟಿಟ್ಯೂಟ್ ಆಫ್ ಸೋಷಿಯಲ್ ಆಂಡ್ ಇಕನಾಮಿಕ್ ಚೇಂಜ್ ನ ಮಾಜಿ ನಿರ್ದೇಶಕ ಪ್ರೊ. ಆರ್.ಎಸ್. ದೇಶಪಾಂಡೆ, ಪರಿಕ್ರಮ ಹ್ಯುಮ್ಯಾನಿಟಿ ಫೌಂಡೇಷನ್‌ ಸಂಸ್ಥಾಪಕ ಶುಕ್ಲಾ ಬೋಸ್, ಪ್ರೊ.ವಿ.ನಾಗೇಂದ್ರ ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

Don`t copy text!